ಮುನಿಸಿಪಾಲಿಟಿ ಬಜೆಟ್ ಗೆ ಹೋಲಿಸಿ ರಾಜ್ಯ ಬಜೆಟ್ ಟೀಕಿಸಿದ ರಾಜ್ಯರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ….

ಮೈಸೂರು,ಮಾ,5,2020(www.justkannada.in):  ಇಂದು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಮುನಿಸಿಪಾಲಿಟಿ ಬಜೆಟ್ ತರ ಕಾಣ್ತಿದೆ. ಈ ಬಜೆಟ್ನಿಂದ ರೈತರಿಗೆ, ಗ್ರಾಮೀಣ ಭಾಗದ ಜನತೆಗೆ ಅನುಕೂಲವಿಲ್ಲ ಎಂದು ರಾಜ್ಯರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಡಗಲಪುರ ನಾಗೇಂದ್ರ, ಇದು ಮೇಲ್ನೋಟಕ್ಕೆ ಕೃಷಿ ಪರ ಬಜೆಟ್ ರೀತಿ ಕಂಡರೂ ಏನೂ ಪ್ರಯೋಜನವಿಲ್ಲ‌. ಯಡಿಯೂರಪ್ಪನವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ರೆ, ರೈತರ ಎಲ್ಲಾ ಸಾಲವನ್ನ ಮನ್ನಾ ಮಾಡ್ತಿದ್ರು. ಆದ್ರೆ ನಮ್ಮ ನಿರೀಕ್ಷೆಗಳೆಲ್ಲ ಬರೀ ಬೇಡಿಕೆಗಳೆ ಆಗಿಯೇ ಉಳಿದಿವೆ, ಯಾವುದು ಈಡೇರಿಲ್ಲ. ಸಾಲದ ಮೇಲಿನ ಸುಸ್ಥಿ ಬಡ್ಡಿ ಮನ್ನಾ ಮಾಡ್ತಾರೆ. ಇದು ರೈತರ ಕಷ್ಟಕ್ಕೆ ಸಹಕಾರ ಆಗಲ್ಲ. ಸುಸ್ತಿ ಬಡ್ಡಿಯನ್ನ ಬ್ಯಾಂಕ್ಗಳೇ ಮಾಡ್ತವೆ. ಇದು ರೈತರ ಕಣ್ಣೊರೆಸುವ ತಂತ್ರ ಎಂದು ಕಿಡಿಕಾರಿದರು.

ಯಡಿಯೂರಪ್ಪನವರ ಬಜೆಟ್ ನಲ್ಲಿ ಸ್ವಲ್ಪ ಮಟ್ಟಿಗೆ ಸ್ವಾಗತಕರವಾಗಿರುವುದು ಕೃಷಿ ಕಾರ್ಮಿಕರಿಗೆ ಪ್ರೀಪೆಡ್ ಹೆಲ್ತ್ ಕಾರ್ಡ್ ಕೊಟ್ಟಿದ್ದಾರೆ. ಮೀನುಗಾರರಿಗೆ ಮೋಟರ್ ಬೈಕ್ ಇವುಗಳನ್ನ ನಾವು ಸ್ವಾಗತಿಸುತ್ತೇವೆ‌. ಈ ಬಜೆಟ್ನಲ್ಲಿ ಪ್ರವಾಹ ಪೀಡಿತರಿಗೆ, ಬರಗಾಲದಲ್ಲಿ ತತ್ತರಿಸಿದ ರೈತರಿಗೆ ಸಹಾಯ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಯಡಿಯೂರಪ್ಪನವರು ಆ ಪ್ರಯತ್ನವನ್ನೇ ಮಾಡಿಲ್ಲ. ಈ ಬಜೆಟ್ನಲ್ಲಿ ನೀರಾವರಿಗೆ ಹೆಚ್ಚಿನ ಹೊತ್ತು ಕೊಡಲಿಲ್ಲ. ಪಕ್ಕದ ತೆಲಂಗಾಣ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಆದ್ರೆ ನಮ್ಮಲ್ಲಿ ನೀರಾವರಿಗೆ ಆದ್ಯತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: farmer leader-Badalepura Nagendra-criticized -state budget