ನಮ್ಮದೆ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ: ರಾಜಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು-  ಶಾಸಕ ಸಿ.ಟಿ ರವಿ ಕಿಡಿ.

Promotion

ನವದೆಹಲಿ,ಜೂನ್,29,2022(www.justkannada.in): ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ರನ್ನ ಇಬ್ಬರು ಕಿಡಿಗೇಡಿಗಳು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ನಮ್ಮದೆ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ.  ಪ್ರಚೋದನೆ ಕೊಟ್ಟ ಅಂಶ, ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕು ಎಂದಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಶಾಸಕ ಸಿಟಿ ರವಿ, ನಮ್ಮದೆ ನೆಲದಲ್ಲಿ ಮತಾಂಧತೆ ಕ್ರೌರ್ಯ ನಡೆದಿದೆ. ಪ್ರಚೋದನೆ ಕೊಡುವ ಮೂಲ ಹುಡುಕಬೇಕಿದೆ. ಪ್ರಚೋದನೆ ಕೊಟ್ಟ ಅಂಶ, ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕು. ರಾಜಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು. ಓಲೈಕೆ ರಾಜಕಾರಣದ ಪ್ರಭಾವ ದೇಶ ಇಬ್ಬಗಾವಾಯ್ತು.

ಮಾನವೀಯತೆಯ ವಿರುದ್ಧವಾದ ಮಾನಸಿಕತೆವಿದು. ಸ್ಟೆಟಸ್ ಹಾಕಿದ್ದೆ ತಪ್ಪೇ, ನಿತ್ಯ ದೇವರ ಅಪಮಾನ ಮಾಡಲಾಗುತ್ತಿದೆ. ಸ್ವಧರ್ಮ ಪ್ರೀತಿಸಬೇಕು, ಪರಧರ್ಮ ಗೌರವಿಸಬೇಕು ಎಂದು ಸಿಟಿ ರವಿ  ಹೇಳಿದರು.

Key words: fanaticism –rajasthan-murder-case-MLA-CT Ravi