ಕೌಟುಂಬಿಕ ಕಲಹ : ಪತ್ನಿಯನ್ನು ಕೊಂದ ಪತಿ

Promotion

ಚಾಮರಾಜನಗರ,ಅಕ್ಟೋಬರ್,24,2020(www.justkannada.in)  ಮಲೆಮಹದೇಶ್ವರ ಬೆಟ್ಟದ ಆಣೆಹೊಲ ಎಂಬಲ್ಲಿ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದಿರುವ ಘಟನೆ ನಡೆದಿದೆ.jk-logo-justkannada-logo

ಗ್ರಾಮದ ನಿವಾಸಿ ಮಹಾದೇವ ತನ್ನ ಪತ್ನಿ ಸಿದ್ದಮ್ಮ(28) ಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಮಹಾದೇವ ಕುಡಿತದ ಚಟಕ್ಕೆ ದಾಸನಾಗಿದ್ದ. ಕೊಡಗಿನಲ್ಲಿ ಕೂಲಿ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಹಿಂತಿರುಗಿ ಬಂದಿದ್ದ ಎಂದು ತಿಳಿದು ಬಂದಿದೆ.

ಪತಿ, ಪತ್ನಿ ಜಗಳ ವಿಕೋಪ ಸುತ್ತಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ

ಶುಕ್ರವಾರ ಸಂಜೆಯೂ ಕುಡಿದು ಬಂದ ಮಹಾದೇವ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸುತ್ತಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ, ಪತ್ನಿಯ ಕಾಲುಗಳನ್ನು ಮಡಚಿ, ಅಗರಬತ್ತಿ ಹಚ್ಚಿ ಕುಳಿತಿದ್ದ ವೇಳೆ ಮಗ ಮನೋಜ್ ಮನೆಗೆ ಬಂದು ತಾಯಿ ಶವ ಕಂಡು ಅಳತೊಡಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Family-Strike-husband-killed-wife

ಮೃತಳ ಅಣ್ಣ ನಾಗನಿಂದ ದೂರು, ಮಹದೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮೃತಳ ಅಣ್ಣ ನಾಗ ಎಂಬಾತ ದೂರು ನೀಡಿದ್ದು, ಪತಿಯನ್ನು ಮಹದೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ‌.‌ ಈ ಘಟನೆ ಕುರಿತು ಮಹದೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Family-Strike-husband-killed-wife