ಹುತಾತ್ಮ ಯೋಧರ ಕುಟಂಬಕ್ಕೆ ಅಗತ್ಯ ಸೌಲಭ್ಯ ನೀಡ್ತೇವೆ- ವಿಜಯ ದಿವಸ್ ಹಿನ್ನೆಲೆ ಗೌರವ ಸಮರ್ಪಿಸಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ

Promotion

ಬೆಂಗಳೂರು,ಡಿ,16,2019(www.justkannada.in): ಹುತಾತ್ಮ ಯೋಧರ ಕುಟುಂಬದ ಜತೆ ನಮ್ಮ ಸರ್ಕಾರವಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಅಗತ್ಯ ಸೌಲಭ್ಯ ಒದಗಿಸುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ರಾಜೀವ್ ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯ ಭಾಸ್ಕರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,ಹುತಾತ್ಮ ಯೋಧರ ಕುಟುಂಬ ಕಲ್ಯಾಣಕ್ಕೆ ನೀಡುವ ಅನುದಾನವನ್ನ ಒಂದು ಕೋಟಿಗೆ ಹೆಚ್ಚಳ ಮಾಡಿದ್ದೇವೆ. ವೀರ ಚಕ್ರ ಶೌರ್ಯ ಚಕ್ರದ ಗೌರವದನವನ್ನ 25 ಸಾವಿರ ರೂಗೆ ಹೆಚ್ಚಿಸಿದ್ದೇವೆ. ಹಾಗೆಯೇ  ಸೇಲಾ ಮೆಡಲ್ ಗೌರವಧನವನ್ನ 2 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಳ ಮಾಡಿದ್ದೇವೆ ಎಂದರು.

Key words:  family -martyred warriors – Vijay Diwas –honors- CM BS Yeddyurappa