ತರಬೇತಿ ವಿಮಾನ ಪತನ: ಮಹಿಳಾ ಪೈಲೆಟ್ ಮತ್ತು ತರಬೇತಿ ನಿರತ ಪೈಲೆಟ್ ಸಾವು.

Promotion

ತೆಲಂಗಾಣ,ಫೆಬ್ರವರಿ,26,2022(www.justkannada.in):  ತರಬೇತಿ ವಿಮಾನ ಪತನವಾಗಿ ಮಹಿಳಾ ಪೈಲೆಟ್ ಮತ್ತು ತರಬೇತಿ ನಿರತ ಪೈಲೆಟ್ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.  ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವಿಗೀಡಾಗಿದ್ದಾರೆ. ಈ ತರಬೇತಿ ವಿಮಾನವು ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲ, ತುಂಗತ್ತುರಿ ಸಮೀಪ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಆಡಳಿತ, ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Key words: Fall -training –aircraft-telangana