ಶಿವಮೊಗ್ಗದಲ್ಲಿ ಸ್ಪೋಟ ದುರಂತ: ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ – ಸಚಿವ ಕೆ.ಎಸ್ ಈಶ್ವರಪ್ಪ…!

ಶಿವಮೊಗ್ಗ,ಜನವರಿ,22,2021(www.justkannada.in): ಅಕ್ರಮ ಗಣಿಗಾರಿಕೆ ಎಲ್ಲಾ ಕಡೆ ಇದೆ. ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಕ್ರಮ ತೆಗೆದುಕೊಂಡಿದ್ದೆವು, ಇನ್ನೂ ಮುಂದೆಯೂ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಸ್ಫೋಟಕಕ್ಕೆ ಕಾರಣವೇನೆಂಬುದು ತಿಳಿದು ಬರಬೇಕಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. jk

ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದಲ್ಲಿ ಜಿಲೆಟಿನ್ ಸ್ಪೋಟ ದುರಂತ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ನಿನ್ನೆ ನಾನು ಊರಿನಲ್ಲಿ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದೇನೆ. ನಮ್ಮನೆ ಕಿಟಕಿ ತೆಗೆದುಕೊಂಡಿತ್ತು. ಆ ಮೇಲೆ ಅನುಭವಕ್ಕೆ ಬಂದಿದೆ. ಸ್ಫೋಟದಲ್ಲಿ ಬಿಹಾರಿ ಮೂಲದ ನಾಲ್ಕು ಜನ ಸಾವನ್ನಪ್ಪಿರುವುದು ತಿಳಿದುಬಂದಿದೆ ಎಂದರು.

explosion-tragedy-shimoga-take-action-against-illegal-mining-minister-ks-eshwarappa
ಕೃಪೆ- internet

ನಿನ್ನೆ ಹುಣಸೋಡಿನಲ್ಲಿ ನಡೆದ ಸ್ಫೋಟ ಶಿವಮೊಗ್ಗ ಜನರನ್ನ ತಲ್ಲಣಗೊಳಿಸಿದ್ದು ಈ ಸ್ಫೋಟಕ್ಕೂ ಹಾಗೂ ನಿಗೂಢ ಶಬ್ಧಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖಾ ತಂಡ ಸ್ಪಷ್ಟತೆ ನೀಡಲಿದೆ, ಈ ಸ್ಫೋಟಕ್ಕೆ ಕಾರಣವೇನು. ಶೃಂಗೇರಿಯವರೆಗೆ ಈ ಶಬ್ಧ ಕೇಳಿದೆ ಎಂದು ಜನ ಹೇಳುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದರು.

Key words: Explosion -Tragedy –Shimoga-take action –against- illegal mining-minister-KS Eshwarappa.