ತಜ್ಞರು ಸೂಚನೆ ನೀಡಿದ್ರೆ  ಶಾಲೆ ಪುನಾರಂಭ- ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ.

Promotion

ಬೆಂಗಳೂರು,ಜನವರಿ,20,2022(www.justkannada.in): ತಜ್ಞರು ಸೂಚನೆ ನೀಡಿದರೆ ಮಾತ್ರ  ಶಾಲೆ ಪುನಾರಂಭ ಮಾಡಲಾಗುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಶಾಲೆ ಪುನಾರಂಭ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಕೊರೊನಾ ನಿರ್ವಹಣೆ ಸಂಬಂಧ ನಾಳೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಕೊರೋನಾ ಜಾಸ್ತಿ ಕೇಸ್ ಬಂದ್ ಕಡೆ ಶಾಲೆ ಬಂದ್ ಮಾಡಿದ್ದೇವೆ ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ  ಶಾಲೆ ಬಂದ್ ಆಗಿದ್ದವು.

ನಾಳೆ  ಸಿಎಂ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ಚರ್ಚೆ ನಡೆಯುತ್ತದೆ. ಸಭೆಯಲ್ಲಿ ತಜ್ಞರ ಜತೆ ಚರ್ಚಿಸಲಾಗುತ್ತದೆ  ಬಳಿಕ ಶಾಲೆ ಆರಂಭದ ಬಗ್ಗೆ ಅಂತಿಮ ತೀರ್ಮಾನ ತೆಗೆದಿಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

Key words: Expert –restart- school- Education Minister –BC nagesh