ಪಿಯು ಉಪನ್ಯಾಸಕರ ನೇಮಕ ಪರೀಕ್ಷೆ: ರಾಜ್ಯಶಾಸ್ತ್ರ-2 ಮತ್ತು ಇತಿಹಾಸ ಪತ್ರಿಕೆ-1 ಫಲಿತಾಂಶಕ್ಕೆ ತಡೆ

Promotion

ಬೆಂಗಳೂರು, ಅಕ್ಟೋಬರ್ 13, 2019 (www.justkannada.in): ಪಿಯು ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ-2 ಮತ್ತು ಇತಿಹಾಸ ಪತ್ರಿಕೆ-1 ಫಲಿತಾಂಶ ತಡೆ ಹಿಡಿಯಲಾಗಿದೆ.

ರಾಜ್ಯಶಾಸ್ತ್ರ-2 ಹಾಗೂ ಇತಿಹಾಸ ಪತ್ರಿಕೆ-1 ಕೀ ಉತ್ತರ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ಸಚಿವ ಸುರೇಶ್ ಕುಮಾರ್ ಪರಿಶೀಲನೆಗೆ ಆದೇಶಿಸಿದ್ದರು. ಇದೀಗ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ಹಿಂದಿನ ವಿಶೇಷಾಧಿಕಾರಿ ಬಿ.ಎ. ಹರೀಶ್ ಗೌಡ ಅವರು ರಾಜ್ಯಶಾಸ್ತ್ರ-2 ರ ವಿಷಯಕ್ಕೆ ಮರು ಪರೀಕ್ಷೆ ನಡೆಸಬೇಕು.

ಅಲ್ಲದೇ ಇತಿಹಾಸ ಪತ್ರಿಕೆ-1 ರ ಉತ್ತರಗಳನ್ನು ಹೊಸ ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸುವುದು ಸೂಕ್ತ ಎಂದು ತಿಳಿಸಿದ್ದಾರೆ. ಹೀಗಾಗಿ ರಾಜ್ಯಶಾಸ್ತ್ರ-2 ಮತ್ತು ಇತಿಹಾಸ ಪತ್ರಿಕೆ-1 ರ ಫಲಿತಾಂಶ ತಡೆ ಹಿಡಿಯಲಾಗಿದೆ.