ಎಲ್ಲರೂ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ-ಸಚಿವ ಜೆ.ಸಿ. ಮಾಧುಸ್ವಾವಿು ಸೂಚನೆ.

Promotion

ತುಮಕೂರು,ಜೂನ್,12,2021(www.justkannada.in): ಜಿಲ್ಲೆಯಲ್ಲಿರುವ ಬಟ್ಟೆ, ಜ್ಯೂವೆಲ್ಲರಿ, ಕೈಗಾರಿಕೆ, ಗಾರ್ಮೆಂಟ್ಸ್ ಮಾಲೀಕರು ಕಡ್ಡಾಯವಾಗಿ ಕೋವಿಡ್  ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.jk

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಬಟ್ಟೆ, ಕೈಗಾರಿಕೆ, ಗಾರ್ಮೆಂಟ್ಸ್, ಜ್ಯೂಯಲರಿ ಮಾಲೀಕರೊಂದಿಗೆ ಸಭೆ ನಡೆಸಿ‌ ಮಾತನಾಡಿದ ಸಚಿವ ಮಾಧುಸ್ವಾಮಿ, ‌ ಸೋಮವಾರದಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು,‌ ಇದರನ್ವಯ ಜಿಲ್ಲೆಯಲ್ಲಿರುವ ಕ್ಲಾತ್, ಜ್ಯೂವೆಲ್ಲರಿ, ಕೈಗಾರಿಕೆ, ಗಾರ್ಮೆಂಟ್ಸ್ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ‌ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಹೇಳಿದರು.

ಮೊಬೈಲ್ ಷೋ ರೂಂ‌ ಸೇರಿದಂತೆ ಇತರೆ ಸೇಲ್ಸ್ ಅಂಗಡಿಗಳಿಗೆ ಅವಕಾಶ ಇಲ್ಲ.‌ ಅಧಿಕಾರಿಗಳು ನೀಡಿರುವ ಸಮಯ ಪಾಲನೆ ಮಾಡಬೇಕು ಎಂದು ನಿರ್ದೇಶಿಸಿದರು. 

ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮಾಲೀಕರು ಕಲ್ಯಾಣ ಮಂಟಪ, ಫರ್ನಿಚರ್ಸ್ ಅಂಗಡಿ ತೆರೆಯಲು  ಅನುಮತಿ ನೀಡಬೇಕೆಂದು ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ,  ಸರ್ಕಾರದ ಮಾರ್ಗಸೂಚಿಯಲ್ಲಿ ಇವುಗಳಿಗೆ ಅವಕಾಶವಿಲ್ಲ. ಸ್ವಲ್ಪ ದಿನದ ಮಟ್ಟಿಗೆ ಕಾಯಲೇಬೇಕು ಎಂದರು.

ಸಭೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ‌ ಡಾ.ಕೆ. ವಿದ್ಯಾಕುಮಾರಿ,  ಜ್ಯೂಯಲರಿ, ಬಟ್ಟೆ, ಕೈಗಾರಿಕೆ, ಗಾರ್ಮೆಂಟ್ಸ್ ಮಾಲೀಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Key words: Everyone -must -follow –covid-guidelines-Minister -J.C. Madhuswamy