ಯೂರೋ ಕಪ್‌ ಫುಟ್‌’ಬಾಲ್‌: ಎಂಟು ದಶಕದ ದಾಖಲೆ ಸರಿಗಟ್ಟಿದ ಇಟಲಿ

Promotion

ಬೆಂಗಳೂರು, ಜೂನ್ 22 (www.justkannada.in): ಇಟಲಿ 82 ವರ್ಷಗಳ ರಾಷ್ಟ್ರೀಯ ದಾಖಲೆಯೊಂದನ್ನು ಸರಿದೂಗಿಸಿದೆ.

ಹೌದು. ಯೂರೋ ಕಪ್‌ ಫುಟ್‌’ಬಾಲ್‌ ಪಂದ್ಯಾವಳಿಯಲ್ಲಿ ವೇಲ್ಸ್‌ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ರಾಬರ್ಟೊ ಮ್ಯಾನ್ಸಿನಿ ಸಾರಥ್ಯದ ಹೊಸ ದಾಖಲೆ ನಿರ್ಮಿಸಿದೆ.

ಈ ಜಯದೊಂದಿಗೆ ಇಟಲಿ ಸತತ 30 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಂತಾಯಿತು. 1935-1939ರ ನಡುವಿನ ಅವಧಿಯಲ್ಲೂ ಇಟಲಿ ಸತತ 30 ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಮುಂದಿನದು ನಾಕೌಟ್‌ ಪಂದ್ಯವಾದ್ದರಿಂದ ಗೆಲುವು ಅನಿವಾರ್ಯ.