ಎತ್ತಿಹೊಳೆ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯ- ಸಚಿವ ಕೆ.ಗೋಪಾಲಯ್ಯ

Promotion

ಹಾಸನ,ಜೂ,18,2020(www.justkannada.in): ಸಕಲೇಶಪುರ ಭಾಗದಲ್ಲಿನ ಎತ್ತಿಹೊಳೆ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಮುಂದಿನ ಮಾರ್ಚ್-ಏಪ್ರಿಲ್ ವೇಳೆಗೆ ಇಲ್ಲಿಂದ ನೀರನ್ನು ಎತ್ತುವಳಿ ಮಾಡಲಾಗುವುದು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎತ್ತಿನಹೊಳೆ ಕಾಮಗಾರಿ ಸ್ಥಳ ಪರಿಶೀಲನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ,ಗೋಪಾಲಯ್ಯ, ಪೈಪ್ ಲೈನ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು 3.5 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಗೆ ರೈತರು ಒಪ್ಪುತ್ತಿಲ್ಲ ಇವರ ಮನವೊಲಿಸಲು ಅಗತ್ಯ ಭೂ ಸ್ವಾಧೀನ ಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.ಈ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ತ್ವರಿತ ವಾಗಿ ನಡೆಯಲಿದೆ ಎಂದರು.

ಇನ್ನು ಮುಂದಿನ ವರ್ಷದ ಮಾರ್ಚ್ ವೇಳೆಗೆ ಎತ್ತಿನಹೊಳೆ ಮೊದಲ ಹಂತದ ಕಾಮಗಾರಿ ಮುಗಿಯಲಿದೆ. ಕೊವಿಡ್ ಸಮಸ್ಯೆಯ ಕಾರಣ ಕೆಲಸಗಾರರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ ಬಾಕಿ ಇರುವಷ್ಟು ಕಾರ್ಮಿಕ ರೊಂದಿಗೆ ಕಾಮಗಾರಿ ನಡೆಯುತ್ತಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.ettinahole-first-phase-work-completed-minister-k-gopalaiah

ಇದಲ್ಲದೆ, ಈ ಭಾಗದಲ್ಲಿ ಬೀಳುವ ವಾರ್ಷಿಕ ಮಳೆಯ ಆಧಾರದಲ್ಲಿ ಯೋಜನೆಗೆ ಎಷ್ಟು ಟಿಎಂಸಿ ನೀರು ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ ಸುಮಾರು ೨೧ ಟಿಎಂಸಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.ಜೊತೆಗೆಕಾಮಗಾರಿಗೆ ಆರಂಭದಲ್ಲಿ ೧೨ ಸಾವಿರ ಕೋಟಿ ಯೋಜನೆ ರೂಪಿಸಲಾಗಿತ್ತು ಆದರೆ ಹಲವು ಕಾರಣದಿಂದ ಕಾಮಗಾರಿಗೆ ವಿಳಂಬವಾಗಿದೆ. ಜೊತೆಗೆ ಯೋಜನೆ ವೆಚ್ಚವು ಹೆಚ್ಚಾಗುತ್ತಲೆ ಇದೆ.ಯೋಜನೆಯಿಂದ ಹಲವು ಜಿಲ್ಲೆಗೆ ಕುಡಿವ ನೀರಿನ ಸಮಸ್ಯೆ ಬಗಹರೆಯುವ ಕಾರಣ ಸರ್ಕಾರ ಯೊಜನೆಗೆ ಎಲ್ಲಾ ರೀತಿಯ ನೆರವನ್ನು ನೀಡಲಿದೆ ಎಂದು ಗೋಪಾಲಯ್ಯ  ತಿಳಿಸಿದರು.

ಇದೇ ವೇಳೆ ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಮಾಸ್ಕ್ ಬಳಕೆಯ ಕುರಿತು ಜನಜಾಗೃತಿ ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಹಾಗೂ ಸಕಲೇಶಪುರ ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾಸ್ಕ್ ಡೇ ಅಭಿಯಾನಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು.

ಬೆಳಿಗ್ಗೆ ೧೦-೪೦ ಕ್ಕೆ ಸಕಲೇಶ್ವರ ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಪಾದಯಾತ್ರೆಯು ಪಟ್ಟಣದ ಮುಖ್ಯ ರಸ್ತೆಯಿಂದ ಪುರಸಭೆ ವರೆಗೆ ಸಂಚರಿಸಿತು.ಈ ವೇಳೆ ಮಾಜಿ ಶಾಸಕ ಎಚ್.ಎಮ್.ವಿಶ್ವನಾಥ್, ಜಿಲ್ಲಾಧಿಕಾರಿ ಆರ್.ಗಿರೀಶ್ , ಎಸ್ಪಿ ಆರ್.ಶ್ರೀನಿವಾಸ ಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ನಡುವೆ ಸಕಲೇಶಪುರ ತಾಲ್ಲೂಕು ಕಛೇರಿಯಲ್ಲಿಂದು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಯರಿಗೆ ಸಚಿವ ಗೋಪಾಲಯ್ಯ ಚೆಕ್ ವಿತರಿಸಿದರು.

Key words: ettinahole- first phase – work – completed- Minister- K. Gopalaiah