ಮೈಸೂರಿನಲ್ಲಿ ಸಾರ್ವಜನಿಕರಿಗೆ ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪನೆ…

Promotion

ಮೈಸೂರು,ಸೆಪ್ಟಂಬರ್,10,2020(www.justkannada.in): ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. Establishment -Free -Legal –Service-Center - Public - Mysore.

ಮೈಸೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸ್ಥಾಪಿತವಾಗಿರುವ  ಉಚಿತ ಕಾನೂನು ಸೇವಾ ಕೇಂದ್ರವನ್ನು ಟೇಪ್ ಕತ್ತಿರುವ ಮೂಲಕ  ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಪಿ ದೇವಮಾನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಉಪವಿಭಾಗಾಧಿಕಾರಿ  ವೆಂಕಟರಾಜು, ತಹಸೀಲ್ದಾರ್ ರಕ್ಷಿತ್ ಇತರರು ಭಾಗಿಯಾಗಿದ್ದರು. Establishment -Free -Legal –Service-Center - Public - Mysore.

ಈ ಉಚಿತ ಕಾನೂನು ಸೇವಾಕೇಂದ್ರ ವಾರದಲ್ಲಿ ಎರಡು ದಿನ ಕಾರ್ಯನಿರ್ವಹಿಸುತ್ತದೆ. ಗುರುವಾರ ಮತ್ತು ಶುಕ್ರವಾರ ದಿನದಂದು ಈ ಕೇಂದ್ರ ಸಾರ್ವಜನಿಕ ಸೇವೆಗೆ ಲಭ್ಯವಿರಲಿದ್ದು, ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಕಾನೂನು ಸೇವೆ ಕಲ್ಪಿಸುವ ಉದ್ದೇಶ  ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ್ದಾಗಿದೆ.

Key words: Establishment -Free -Legal –Service-Center – Public – Mysore.