ಪಶುವೈದ್ಯೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್: ನಿರ್ಭಯಾ ತಾಯಿ ಪ್ರತಿಕ್ರಿಯಿಸಿದ್ದು ಹೀಗೆ…

Promotion

ನವದೆಹಲಿ,ಡಿ,6,2019(www.justkannada.in):  ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನ ಎನ್ ಕೌಂಟರ್ ಮಾಡಿದ ಪೊಲೀಸರಿಗೆ ನಿರ್ಭಯಾ ತಾಯಿ ಧನ್ಯವಾದ ಅರ್ಪಿಸಿದ್ದಾರೆ

ನಿರ್ಭಯಾ ಪ್ರಕರಣ ಪ್ರಸ್ತಾಪಿಸಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು 7 ವರ್ಷದಿಂದ ಹೋರಾಡುತ್ತಿದ್ದೇನೆ.  ಆದರೆ ದಿಶಾ ಪೋಷಕರಿಗೆ 7 ದಿನದಲ್ಲೇ ನ್ಯಾಯ ಸಿಕ್ಕಿದೆ. ಕನಿಷ್ಟ ಒಂದು ಮಗಳಿಗೆ ನ್ಯಾಯ ದೊರಕಿದೆ. ಹೀಗಾಗಿ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಬೆಂಕಿಹಚ್ಚಿ ಕೊಲೆ ಮಾಡಿದ್ದ ಆರೋಪಿಗಳಾದ ಮಹಮ್ಮದ್‌ ಆರೀಫ್‌, ಜೊಲ್ಲು ಶಿವ, ಚನ್ನಕೇಶವಲು ಹಾಗೂ ಜೊಲ್ಲು ನವೀನ್‌ ನಾಲ್ವರನ್ನ  ಹೈದರಾಬಾದ್ ಪೊಲೀಸರು ಎನ್ ಕೌಂಟರ್ ಮಾಡಿದ್ದು ಇದಕ್ಕೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನಟರು ರಾಜಕೀಯ ಗಣ್ಯರು ಪೊಲೀಸರ ಕಾರ್ಯವನ್ನ ಶ್ಲಾಘಿಸಿದ್ದಾರೆ.

Key words: En counter – accused – rape murder – veterinarian doctor-Nirbhaya’s mother- responded.