ಆನೆ ನಡೆದಿದ್ದೇ ದಾರಿ: ಒಂಟಿ ಸಲಗ ಯಾವತ್ತು ಡೇಂಜರ್- ಡೈಲಾಗ್ ಮೂಲಕ ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ರಾ ಮಾಜಿ ಸಿಎಂ ಸಿದ್ದರಾಮಯ್ಯ

Promotion

ಬೆಂಗಳೂರು, ಜೂ.6,2019(www.justkannada.in):  ಆನೆ ನಡೆದಿದ್ದೇ ದಾರಿ. ಒಂಟಿ ಸಲಗ ಯಾವತ್ತು ಡೇಂಜರ್ ಹೀಗೆ ಡೈಲಾಗ್ ಹೊಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅದು ಸಲಗ ಚಿತ್ರದ ಮುಹೂರ್ತದ ವೇಳೆಯಲ್ಲಿ.

ಹೌದು, ಇಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ದುನಿಯಾವಿಜಿ ಅಭಿನಯ ಹಾಗೂ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡುತ್ತ,  ಆನೆ ನಡೆದಿದ್ದೆ ದಾರಿ, ಒಂಟಿ ಸಲಗ ಯಾವತ್ತಿದ್ರೂ  ಡೇಂಜರ್ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಮೂಲಕ ಸಿದ್ದರಾಮಯ್ಯ ಇದು ತಮ್ಮ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿರುವವರಿಗೆ ಟಾಂಗ್ ಕೊಟ್ರೆ ಎಂಬ ಪ್ರಶ್ನೆ ಮೂಡಿದೆ.

ಸಲಗ ಚಿತ್ರಕ್ಕೆ ಶುಭಹಾರೈಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಇತ್ತೀಚೆಗೆ ಮಸಾಲೆ ಚಿತ್ರಗಳೇ ಬರುತ್ತವೆ. ವಿಜಿಯ ಎರಡು ಸಿನಿಮಾವನ್ನು ನಾನು ನೋಡಿದ್ದೇನೆ. ದುನಿಯಾ ವಿಜಯ್ ಒಳ್ಳಯ ನಟ. ಜನರಿಗೆ ಸಂದೇಶ ಹಾಗೂ ಮನರಂಜನೆ ನೀಡುವಂತಹ ಸಿನಿಮಾಗಳು ಕೊಡಲಿ ಎಂದು ಚಿತ್ರತಂಡಕ್ಕೆ ಶುಭಕೋರಿದರು.

Key words  #Elephant #Walked #Siddaramaiah #salagamovie