“ಎಲೆಕ್ಟ್ರಿಕಲ್ ವೆಹಿಕಲ್ ಕೊಳ್ಳುವವರಿಗೆ ರಸ್ತೆ ತೆರಿಗೆ ವಿನಾಯಿತಿ” : ಡಿಸಿಎಂ ಲಕ್ಷ್ಮಣ್ ಸವದಿ

Promotion

ಬೆಂಗಳೂರು,ಫೆಬ್ರವರಿ,12,2021(www.justkannada.in) : ಎಲೆಕ್ಟ್ರಿಕಲ್ ವೆಹಿಕಲ್ ಕೊಳ್ಳುವವರಿಗೆ ರಸ್ತೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದೇವೆ. ಪರಿಸರ ಮಾಲಿನ್ಯ ತಡೆಗಟ್ಟಲು ಈ ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.jkಸಾರಿಗೆ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದೇಶಕ್ಕಿಂತ ಭಾರತದಲ್ಲಿಯೇ ಅಪಘಾತ ಪ್ರಮಾಣ ಜಾಸ್ತಿಯಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಪಘಾತಗಳಾದರೆ, ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಅಪಘಾತಗಳು ನಡೆಯುತ್ತಿದೆ. ಈ ಅಪಘಾತಗಳ ನೋವುಂಡವರಲ್ಲಿ ನಾನೂ ಒಬ್ಬ ಎಂದು ಬೇಸರವ್ಯಕ್ತಪಡಿಸಿದರು.ELECTRICAL-Vehicle-buyers-Road-Tax-Immunity-DCM Lakshmana Savadi

ನಮ್ಮ ಚಿಕ್ಕಪ್ಪ ಬಸ್ ಅಪಘಾತದಲ್ಲಿ ತೀರಿ ಹೋದರು. ಮೂರು ತಿಂಗಳ ಹಿಂದೆ ನನ್ನ ವಾಹನಕ್ಕೂ ಅಪಘಾತವಾಗಿತ್ತು. ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿತ್ತು. ಲಾರಿ ಬಂದು ನನ್ನ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ವೆಹಿಕಲ್ ನೋಡಿದ ಬಳಿಕ ನಾನು ಉಳಿದಿದ್ದೆ ಆಶ್ಚರ್ಯ ಎಂದೆನಿಸಿತ್ತು ಎಂದರು.

key words : ELECTRICAL-Vehicle-buyers-Road-Tax-Immunity-DCM Lakshmana Savadi