ಶಾಲೆಗಳನ್ನ ಪ್ರಾರಂಭಿಸುವ ಬಗ್ಗೆ ಚಿಂತನೆ: ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ…..

ಬೆಂಗಳೂರು,ಜೂ,2,2020(www.justkannada.in):  ಮಹಮಾರಿ ಕೊರೋನಾ ಹರಡದಂತೆ ತಡೆಗಟ್ಟಲು ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಅನ್ನ ಸಡಿಲಿಕೆ ಮಾಡಲಾಗಿದ್ದು ಈ ಹಿನ್ನೆಲೆ ಜನಜೀವನ ಯಥಸ್ಥಿತಿಗೆ ಮರಳುತ್ತಿದೆ. ಈ ಮಧ್ಯೆ ಶಾಲೆಗಳನ್ನ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.education-minister-thinking-starting-schools-collect-parental-opinion

ಈ ಕುರಿತು ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಮಾರ್ಗಸೂಚಿ ಪ್ರಕಾರ ಶಾಲೆ ಪ್ರಾರಂಭದ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಶಾಲೆ ಪ್ರಾರಂಭಿಸಬಹುದಾದ ದಿನಾಂಕ, ಸಾಮಾಜಿಕ ಅಂತರ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರು ಮತ್ತು ಎಸ್ ಡಿಎಂಸಿ ಸದಸ್ಯರಿಂದ ಮಾಹಿತಿ ಸಂಗ್ರಹಿಸುವಂತೆ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಜೂನ್ 12ರೊಳಗೆ ಅಭಿಪ್ರಾಯ ಸಂಗ್ರಹಿಸಿ ಶಾಲೆ ಪ್ರಾರಂಭದ ಬಗ್ಗೆ ವರದಿ ನೀಡಬೇಕು. ಅಭಿಪ್ರಾಯ ಬಂದ ಬಳಿಕ ಶಾಲೆ ಪ್ರಾರಂಭಿಸಬಹುದಾದ ದಿನಾಂಕ ಘೋಷಿಸಬಹುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Key words: education minister- Thinking – starting- schools-collect- parental -opinion.