ಶಿಕ್ಷಣ ಇಲಾಖೆ ಹಾಳು ಮಾಡುವ ಅಧಿಕಾರಿ ವೃಂದ ಇದೆ: ಅವರ ಮಾತು ಕೇಳಬೇಡಿ- ಸಚಿವ ಸುರೇಶ್ ಕುಮಾರ್ ಗೆ ಹೀಗೆ ಸಲಹೆ ನೀಡಿದ್ದು ಯಾರು ಗೊತ್ತೆ..?

Promotion

ಮಂಡ್ಯ,ಜೂನ್,29,2021(www.justkannada.in): ಶಿಕ್ಷಣ ಇಲಾಖೆ ಹಾಳು ಮಾಡುವ ಅಧಿಕಾರಿ ವೃಂದ ಇದೆ. ಸಚಿವ ಸುರೇಶ್ ಕುಮಾರ್ ರವರೆ ಅವರ ಮಾತು ಕೇಳಬೇಡಿ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ,  ರಾಜ್ಯ ಮತ್ತು ಕೇಂದ್ರ ಸರ್ಕಾರ ಮಕ್ಕಳ ಜೀವದ ಜತೆ ಆಟವಾಡುತ್ತಿದೆ. ಪಿಯುಸಿ ಪರೀಕ್ಷೆ ರದ್ಧು ಮಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ದ್ವಂದ್ವ ನಿಲುವು ಅನುಸರಿಸುತ್ತಿದೆ. ಸಚಿವ ಸುರೇಶ್ ಕುಮಾರ್ ಬೆಳಿಗ್ಗೆ ಒಂದು ಸಂಜೆ ಒಂದು ಹೇಳುತ್ತಾರೆ ಎಂದು ಟೀಕಿಸಿದರು.

ಸಚಿವ ಸುರೇಶ್ ಕುಮಾರ್ ಸುತ್ತಾಮುತ್ತಾ ವಿಷ ವರ್ತುಲ ಇದೆ. ಶಿಕ್ಷಣ ಇಲಾಖೆ ಹಾಳು ಮಾಡುವ ಅಧಿಕಾರಿ ವೃಂದ ಇದೆ. ಸುರೇಶ್ ಕುಮಾರ್ ಅವರೇ ಅವರ ಮಾತು ಕೇಳಬೇಡಿ. ಸಾರ್ವಜನಿಕವಾಗಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಶಿವರಾಮೇಗೌಡ  ತಿಳಿಸಿದರು.

Key words: education –department-minister –suresh kumar-former MP-LR  Shivaramega Gowda