ವಿಪಕ್ಷಗಳನ್ನ ಹತ್ತಿಕ್ಕುವ ಪ್ರಯತ್ನ ಕೈಬಿಡಿ: ಇಲ್ಲದಿದ್ದರೇ ದೇಶಾದ್ಯಂತ ಪ್ರತಿಭಟನೆ- ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ.

Promotion

ಬೆಂಗಳೂರು,ಜೂನ್,13,2022(www.justkannada.in): ಇಡಿ ಮೂಲಕ ಕಾಂಗ್ರೆಸ್ ಹೆದರಿಸುತ್ತೇವೆಂಬ ಭ್ರಮೆಯಲ್ಲಿ  ಬಿಜೆಪಿ ನಾಯಕರಿದ್ದಾರೆ. ವಿಪಕ್ಷಗಳನ್ನ ಹತ್ತಿಕ್ಕುವ ಪ್ರಯತ್ನ ಕೈಬಿಡಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದರು.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ಸಮನ್ಸ್ ನೀಡಿರುವುದನ್ನ ಖಂಡಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ  ಸಿದ್ಧರಾಮಯ್ಯ, ಇದು ಸಾಂಕೇತಿಕ ಪ್ರತಿಭಟನೆ ಅಷ್ಟೆ.  ಮುಂದೆ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ  ಇಡಿ ಮೂಲಕ ಕಾಂಗ್ರೆಸ್ ಹೆದುರಿಸುತ್ತೇವೆಂಬ ಭ್ರಮೆಯಲ್ಲಿ  ಬಿಜೆಪಿ ನಾಯಕರಿದ್ದಾರೆ.  ವಿಪಕ್ಷಗಳನ್ನ ಹತ್ತಿಕ್ಕುವ ಪ್ರಯತ್ನ ಕೈಬಿಡಿ.  ಇಲ್ಲದಿದ್ದರೇ ಸರ್ಕಾರಿ ಕಚೇರಿ ಬಂದ್ ಮಾಡಿಸ್ತೇವೆ ಎಂದು ಎಚ್ಚರಿಕೆ ನೀಡಿದರು.

Key words: ED- Summons- opposition- protest-Former CM-Siddaramaiah