ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಇಡಿ ಶಾಕ್: ಹೊಸ ಚಾರ್ಜ್ ಶೀಟ್ ಸಲ್ಲಿಕೆ.

ಬೆಂಗಳೂರು,ಮೇ,26,2022(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಹೊಸ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಮೂಲಕ ಡಿ.ಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದೆ.

2019ರಲ್ಲಿ ನಡೆದಿದ್ದ ಇಡಿ ದಾಳಿ ಸಂಬಂಧ ಇಡಿ ಅಧಿಕಾರಿಗಳು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ . ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2019ರಲ್ಲಿ ಡಿಕೆ ಶಿವಕುಮಾರ್ ನಿವಾಸ ಮತ್ತು ಆಪ್ತರ ಮೇಲೆ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

ಬಳಿಕ ಡಿ.ಕೆ ಶಿವಕುಮಾರ್ ರನ್ನ ಬಂಧಿಸಿ ವಿಚಾರಣೆ ನಡೆಸಿತ್ತು. ಎರಡುವರೆ ವರ್ಷದ ಬಳಿಕ ಇದೀಗ ಹೊಸದಾಗಿ ಆರೋಪಪಟ್ಟಿ ಸಲ್ಲಿಕೆಯಾಗಿದೆ.

Key words: ED – KPCC President -DK Shivakumar-New -Charge Sheet

ENGLISH SUMMARY…

Submission of new chargesheet by ED gives KPCC President a shocker
Bengaluru, May 26, 2022 (www.justkannada.in): The Enforcement Directorate (ED) has submitted a new chargesheet against KPCC President D.K. Shivakumar in the money laundering case.
The ED officials have submitted a fresh chargesheet to the special Court in Delhi concerning the 2019 raid. This has led to another problem for D.K. Shivakumar. The ED had raided the residence of D.K. Shivakumar and his relatives and accomplices in 2019. Later he was taken into custody and investigated. Two years later another chargesheet has been submitted.
Keywords: KPCC President/ D.K. Shivakumar/ ED/ new chargesheet