ಮಂಗಳೂರಿನಲ್ಲಿ ಅ.2 ರಂದು ‘ಇ-ಸ್ವಚ್ಛ ಭಾರತ್’ ಕಾರ್ಯಕ್ರಮಕ್ಕೆ ಚಾಲನೆ…

ಮಂಗಳೂರು,ಸೆ,13,2019(www.justkannada.in):  ಮಂಗಳೂರಿನಲ್ಲಿ ‘ವಿ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ ‘ಇ-ಸ್ವಚ್ಛ ಭಾರತ್’ ಎಂಬ ವಿಶಿಷ್ಟ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮಗಳಿಗೆ ಅ.2ರಂದು ಮಂಗಳೂರಿನಲ್ಲಿ ಚಾಲನೆ ನೀಡಲಿದೆ.

ಇ-ತ್ಯಾಜ್ಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಇ-ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವುದು, ಅವುಗಳ ಪುನರ್ ಬಳಕೆ ಮಾಡುವುದು ಹಾಗೂ ಇ-ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದು ಇ-ಸ್ವಚ್ಛ ಭಾರತ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಡಾ. ಅನಂತ್ ಪ್ರಭು ಜಿ. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ಟೋಬರ್ 2ಕ್ಕಿಂತ ಮೊದಲು ಮಂಗಳೂರು ನಗರ ವಾಸಿಗಳಿಂದ ಇ-ತ್ಯಾಜ್ಯಗಳನ್ನು ಸಂಗ್ರಹಿಸಲಾಗುವುದು. ಅವುಗಳನ್ನು ಹೈದ್ರಾಬಾದ್‌ನಲ್ಲಿರುವ ವಿಲೇವಾರಿ ಕಂಪೆನಿಗೆ ನೀಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮವನ್ನು ಒಂದೇ ಬಾರಿ ನಡೆಸಲಾಗುವುದು. ಬಳಿಕ ಇ-ತ್ಯಾಾಜ್ಯದ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದವರು ಹೇಳಿದರು.

200 ಅಪಾರ್ಟ್‌ಮೆಂಟ್‌ಗಳಿಂದ ಸಂಗ್ರಹ: ಹೆಚ್ಚು ತ್ಯಾಜ್ಯ ಕೊಟ್ಟವರಿಗೆ ಶ್ಲಾಘನಾ ಪತ್ರ….

ಮಂಗಳೂರಿನ 200 ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಇ-ತ್ಯಾಜ್ಯ ಸಂಗ್ರಹಣಾ ದಿನದ ಮಾಹಿತಿಯಿರುವ ಪೋಸ್ಟರನ್ನು ಅಲ್ಲಿನ ನೋಟಿಸ್ ಬೋರ್ಡ್‌ನಲ್ಲಿ ಅಂಟಿಸುತ್ತೇವೆ. ನಿರ್ದಿಷ್ಟವಾಗಿ ಸೂಚಿತ ದಿನದಂದು ಅಲ್ಲಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸುತ್ತೇವೆ. ಇ-ತ್ಯಾಜ್ಯಕ್ಕೆ ವಸ್ತುಗಳನ್ನು ನೀಡಿ ಈ ಯೋಜನೆಗೆ ಬೆಂಬಲ ಸೂಚಿಸುವ ಎಲ್ಲರಿಗೂ ‘ಸೈಬರ್ ಸೇಫ್ ಗರ್ಲ್’ ಪುಸ್ತಕದ ಪ್ರತಿಯನ್ನು ನೀಡಲಾಗುವುದು. ಅತಿ ಹೆಚ್ಚು ಇ-ತ್ಯಾಜ್ಯ ನೀಡಿದವರಿಗೆ ಶ್ಲಾಘನಾ ಪ್ರಮಾಣಪತ್ರ ನೀಡಲಾಗುವುದು ಎಂದರು.

ಜನಜಾಗೃತಿ…

ಇ-ತ್ಯಾಜ್ಯ ಕುರಿತಂತೆ ಇರುವ ಹಲವು ನಿಯಮಾವಳಿಗಳ ಕುರಿತಂತೆಯೂ ಜಾಗೃತಿ ಮೂಡಿಸುವ ಉದ್ದೇಶ ಸಂಘಟನೆಗಿದೆ. ಪ್ರಸ್ತುತ ವಿಶ್ವದಲ್ಲೇ ಇ-ತ್ಯಾಜ್ಯ ಉತ್ಪಾದನೆಯಾಗುವ ಮೊದಲ ದೇಶ ಭಾರತವಾಗಿದ್ದು, ಅದರ ನಿರ್ವಹಣೆಯೇ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇ-ತ್ಯಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕ ಇರುವುದರಿಂದ ಪರಿಸರ- ಜನಜೀವನಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಇ-ಸ್ವಚ್ಛ ಭಾರತ್ ಕಾರ್ಯಕ್ರಮ ಆಯೋಜಿಸಿರುವುದಾಗಿ ಅನಂತ ಪ್ರಭು ಜಿ. ತಿಳಿಸಿದರು.

ಇ-ತ್ಯಾಜ್ಯ ನಿರ್ವಹಣೆ ಲಾಭದಾಯಕವೂ ಹೌದು. ಅನೇಕ ರಾಷ್ಟ್ರಗಳು ಇ-ತ್ಯಾಜ್ಯಗಳನ್ನು ಆಮದು ಮಾಡಿ ವಿಲೇವಾರಿ ಮಾಡುತ್ತಿವೆ. ನಮ್ಮ ದೇಶದಲ್ಲಿ ಇ-ತ್ಯಾಜ್ಯ ವಿಲೇವಾರಿಯ ಕುರಿತು ನಿಯಮಗಳಿದ್ದು, ಅವುಗಳ ಪರಿಣಾಮಕಾರಿ ಜಾರಿ ಆಗಬೇಕಿದೆ ಎಂದರು.

ವಿಕಾಸ್ ಕಾಲೇಜಿನ ಟ್ರಸ್ಟಿ ಜೆ ಕೊರಗಪ್ಪ, ವಿ ಆರ್ ಯುನೈಟೆಡ್‌ನ ಅಧ್ಯಕ್ಷ ಅಜ್ಫಾರ್ ರಝಾಕ್, ಉದ್ಯಮಿ ರಕ್ಷಿತ್ ಶೆಟ್ಟಿ, ವಿ ಆರ್ ಯುನೈಟೆಡ್‌ನ ಸಲಹೆಗಾರ ಕೃಷ್ಣ ಶೆಟ್ಟಿ ಮತ್ತಿತರರಿದ್ದರು.

 

ಇಲೆಕ್ಟ್ರಾನಿಕ್ ತ್ಯಾಜ್ಯಗಳ್ಯಾವವು?

ಒಡೆದು ಹೋದ ಅಥವಾ ಬಳಕೆಗೆ ಯೋಗ್ಯವಲ್ಲದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು ಹಾಗೂ ಸಾಧನಗಳನ್ನು ಎಲೆಕ್ಟ್ರಾನಿಕ್ ವೇಸ್‌ಟ್‌ ಅಥವಾ ಇ-ವೇಸ್‌ಟ್‌ ಎಂದು ಕರೆಯಲಾಗುತ್ತದೆ. ಟ್ಯೂಬ್‌ಲೈಟ್, ಪೆನ್ ಡ್ರೈವ್‌ನಿಂದ ಹಿಡಿದು ಸೆಮಿ ಕಂಡಕ್ಟರ್‌ಗಳು ಹಾಗೂ ಸೆನ್ಸರ್‌ಗಳು, ಮಾನಿಟರ್‌ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು, ಟಿವಿ, ಸ್ಟೀರಿಯೋ, ಕಾಪಿಯರ್ ಹಾಗೂ ಫ್ಯಾಕ್ಸ್ ಮೆಶಿನ್ ಇತ್ಯಾದಿಗಳು.

Summary….

Electronic waste (e-waste) refers to the disposal of broken or obsolete electronic components and materials. Technology is becoming more and more integrated into every aspect of our lives. Semiconductors and sensors are being added to products that never before had them, creating wearable monitors, smart homes, TVs that can stream programming from the internet, and much more.

With the usage of electrical and electronic equipment (EEE) on the rise, the amount of electrical and electronic waste (e-waste) produced each day is equally growing enormously around the globe. E-waste materials may be valuable and recyclable, such as random access memory and reusable laptops. However, hazardous materials, such as cathode ray tube monitors, require special handling in disposal. Common discarded electronic products include computers, televisions, stereos, copiers and fax machines.

Electronic waste is emerging as a serious public health and environmental issue in India.India is the “fifth largest electronic waste producer in the world”; approximately 2 million tons of e-waste are generated annually and an undisclosed amount of e-waste is imported from other countries around the world. Annually, computer devices account for nearly 70% of e-waste, 12% comes from the telecom sector, 8% from medical equipment and 7% from electric equipment. The government, public sector companies, and private sector companies generate nearly 75% of electronic waste, with the contribution of individual household being only 16%. India had 1.012 billion active mobile connections in January 2018. Every year the number is growing exponentially. According to a January 2019 report from the World Economic Forum, E-waste is now the fastest-growing waste stream in the world, with an estimated waste stream of 48.5 million tonnes in 2018.

Electronic devices are made of a complex mix of materials that include gold, silver, copper, platinum, palladium, lithium, cobalt and other valuable elements. The U.S. Environmental Protection Agency (EPA) says, “One metric ton of circuit boards can contain 40 to 800 times the amount of gold and 30 to 40 times the amount of copper mined from one metric ton of ore in the United States.” These precious materials can be reclaimed through recycling.

But electronic devices also comprise toxic heavy metals like lead, mercury, cadmium and beryllium, polluting PVC plastic, and hazardous chemicals, such as brominated flame retardants, which can harm human health and the environment.

Children are especially vulnerable to the health risks that may result from e-waste exposure and, therefore, need more specific protection. As they are still growing, children’s intake of air, water and food in proportion to their weight is significantly increased compared to adults, – and with that, the risk of hazardous chemical absorption. Furthermore, their bodies’ functional systems such as the central nervous, immune, reproductive and digestive system are still developing and exposure to toxic substances, by hampering further development, may cause irreversible damage. Many children are exposed to e-waste-derived chemicals in their daily life due to unsafe recycling activities that are often conducted at their home- either by family members or by the children themselves. Furthermore, children may be exposed through dump sites located close to their homes, schools and play areas.

As more people buy electronic equipment, manufacturers are beginning to face shortages of the raw materials needed to make their products, so reclaiming and reusing the materials from discarded products and waste—a process called urban mining—makes economic and environmental sense. A recent study in China found that mining copper, gold and aluminum from ore costs 13 times more than recovering the metals through the urban mining of e-waste.

We Are United in association with Cyber Safe Girl has come out with a novel initiative-eSwacch Bharat a first of its kind program for eWaste management. Our intention is to create awareness about eWaste and encourage people to reduce, resue and recycle eWaste and make it a part of the Swacch Bharat initiative. The details of this first of its kind program are as follows:

1. Visit 200 apartments and display the poster on the notice board with the collection date.

2. Visit the apartment and collect the eWaste.

3. On October 2nd, inaugurate the eSwacch Bharath.

4. Responsibly recycle the eWaste.

5. A copy of Cyber Safe Girl to all those who support this initiative by donating eWaste.

6. Certificate of Appreciation to highest eWaste donors.

We also want to create awareness about the various regulations associated with eWaste. The Ministry of Environment, Forests, and Climate Change (MoEFCC) is primarily responsible for regulations regarding electronic waste. Additionally, the Central Pollution Control Board (CPCB) and State Pollution Control Board (SPCB) produce implementation procedures to ensure proper management of rules set forth by the MoEFCC.

E-Waste Management and Handling Rules, 2011
E-Waste Management Rules, 2016
Amendment to the E-Waste Management Rules, 2018

Request you to kindly support this initiative.

Key words: e-swaccha barath-drive- mangalore- October 2-VR United Unit