ಸಲಗ OTT ರಿಲೀಸ್ ಕುರಿತು ಸ್ಪಷ್ಟನೆ ನೀಡಿದ ದುನಿಯಾ ವಿಜಿ

Promotion

ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ಸಲಗ ಸಿನಿಮಾ ಥಿಯೇಟರ್ ನಲ್ಲಿಯೇ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗ ಒಟಿಟಿಯಲ್ಲಿ ರಿಲೀಸ್ ಮಾಡಲ್ಲ ಎಂದು ನಟ, ನಿರ್ದೇಶಕ ದುನಿಯಾ ವಿಜಯ್ ಸ್ಪಷ್ಟನೆ ನೀಡಿದ್ದಾರೆ.

ಸಲಗ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲ್ಲ. ಬೇಕೆಂದೇ ಯಾರೋ ನಮ್ಮ ಸಿನಿಮಾ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಗೆ ಮಾಡುವುದಿದ್ದರೆ ಮೊದಲೇ ನಮಗೆ ಆಫರ್ ಬಂದಿತ್ತು ಎಂದು ವಿಜಿ ಹೇಳಿದ್ದಾರೆ.

ಈ ಮೂಲಕ ಒಟಿಟಿ ರಿಲೀಸ್ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತದೆ ಎಂದರೆ ಚಿತ್ರಮಂದಿರಗಳಿಗೆ ಜನ ಬರುವುದು ಕಡಿಮೆಯಾಗುತ್ತದೆ. ಕೆಲವರು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ವಿಜಿ ಹೇಳಿದ್ದಾರೆ.