ಡ್ರಂಕ್ ಅಂಡ್ ಡ್ರೈವ್ ಕೊರೋನಾಗಿಂತ ಅಪಾಯಕಾರಿ ಎಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್…

ಬೆಂಗಳೂರು,ಮಾ,10,2020(www.justkannada.in):  ಡ್ರಂಕ್‌& ಡ್ರೈವ್‌ ಕೊರೋನಾ ವೈರಸ್ ಗಿಂತ ಅಪಾಯಕಾರಿಯಾದ್ದದ್ದು. ಹೀಗಾಗಿ ಡ್ರಂಕ್ ಅಂಡ್ ಡ್ರೈವ್‌ ತಪಾಸಣೆ ನಿಲ್ಲಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್,ಡ್ರಂಕ್‌&ಡ್ರೈವ್‌ ತಪಾಸಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಕೊರೋನಾ ವೈರಸ್ ಭೀತಿ ಹಿನ್ನೆಲೆ ಪೊಲೀಸ್ ಸಿಬ್ಬಂದಿಗೆ ಯಾವುದೇ ಖಾಯಿಲೆ ಬಂದರೂ ರಜೆ ನೀಡಲಾಗುತ್ತದೆ. ಪೊಲೀಸರು ಸದಾ ಜನರೊಂದಿಗೆ ಬೆರೆಯುತ್ತಾರೆ. ಹೀಗಾಗಿ ಸಿಬ್ಬಂದಿಗಳು ಮಾಸ್ಕ್ ಬಳಸಬೇಕು ಎಂದು ಸೂಚಿಸಿದರು.

ಕೊರೋನಾ ಹರಡುವಿಕೆ ತಡೆಗಟ್ಟುವಿಕೆ ಕ್ರಮಗಳ ಬಗ್ಗೆ ಮುಖ್ಯಕಾರ್ಯದರ್ಶಿ ಸೂಚಿಸಿದ್ದಾರೆ. ಠಾಣೆಗಳಲ್ಲಿ ಶುಚಿತ್ವ ಕಾಪಾಡಲು ಅಗತ್ಯ ವಸ್ತುಗಳನ್ನ ಪೂರೈಸುತ್ತೇವೆ ಎಂದು ಹೇಳಿದ ಭಾಸ್ಕರ್ ರಾವ್ , ಕೋರಾನ ಭೀತಿಯಲ್ಲಿ ಸದ್ಯಕ್ಕೆ ಯಾವುದೇ ಪ್ರತಿಭಟನೆಯನ್ನು ಹಮ್ಮಿಕೊಳ್ಳದಂತೆ ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

Key words: Drunk and drive – dangerous – corona virus-no stopping- Bangalore City- Police Commissioner -Bhaskar Rao.