ಕೊಡಗಿನಲ್ಲೂ ಡ್ರಗ್ಸ್ ದಂಧೆ, ಇಬ್ಬರ ಬಂಧನ…?

Promotion

ಕೊಡಗು,ಆಗಸ್ಟ್,28,2020(www.justkannada.in):  ಮೊನ್ನೆಯಷ್ಟೇ  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎನ್ ಸಿಬಿ ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲವನ್ನ ಭೇದಿಸಿದ್ದರು. ರಾಜಾರೋಷವಾಗಿ ಲಾರಿಯನ್ನ ಸಾಗಿಸಲಾಗುತ್ತಿದ್ದ  ಸುಮಾರು  2ಕ್ವಿಂಟಾಲ್  ಗಾಂಜಾವನ್ನ ವಶಕ್ಕೆ ಪಡೆದು ಮೂವರನ್ನ ಬಂಧಿಸಿದ್ದರು. ಇದೀಗ ಕೊಡಗಿನಲ್ಲೂ ಪೊಲೀಸರು ಡ್ರಗ್ಸ್ ದಂಧೆ ಪತ್ತೆ ಹಚ್ಚಲಾಗಿದೆ ಎನ್ನಲಾಗುತ್ತಿದೆ.jk-logo-justkannada-logo

ಕೊಡಗು ಡಿಸಿಐಬಿ, ಮಡಿಕೇರಿ ಮತ್ತು ಕುಶಾಲನಗರ ಪೊಲೀಸರು  ಬೆಳಗ್ಗಿನ ಜಾವ 3 ಗಂಟೆ ವೇಳೆ ಕಾರ್ಯಾಚರಣೆ ನಡೆಸಿ ಡ್ರಗ್ಸ್ ದಂಧೆ ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಡ್ರಗ್ಸ್ ದಂಧೆ ನಡೆಸುತ್ತಿದ್ದ ಐವರ ಪೈಕಿ ಇಬ್ಬರನ್ನ ಪೊಲೀಸರು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.drugs-raide-kodagu-police

ಓರ್ವ ವಿದೇಶಿ ಪ್ರಜೆ, ಮಹಿಳೆ ಸೇರಿ ಮೂವರು ಪರಾರಿಯಾಗಿದ್ದು ಬಂಧಿತರಿಂದ 2 ಕಾರು ಸೇರಿ ಅಲ್ಪ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ . ಕುಶಾಲನಗರದ ಬಡಾವಣೆ ಮತ್ತು ಗುಡ್ಡೆಹೊಸೂರು ಬಳಿ ಕಾರುಗಳು ಪತ್ತೆಯಾಗಿವೆ ಎನ್ನಲಾಗಿದೆ.

Key words: Drugs- raide- Kodagu-police