ಮೈಸೂರಿನಲ್ಲೂ ಡ್ರಗ್ಸ್ ದಂಧೆ ಆರೋಪ: ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಸೆಪ್ಟಂಬರ್,12,2020(www.justkannada.in): ಮೈಸೂರಿನಲ್ಲೂ ಡ್ರಗ್ಸ್ ದಂಧೆ ಇದೆ ಎಂಬ ಆರೋಪ  ಕೇಳಿ ಬಂದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ ಸೇಠ್, ಯಾರು ಏನು ಬೇಕಾದರೂ ಆರೋಪ ಮಾಡಲಿ. ಕರ್ನಾಟಕದಲ್ಲಿ ಡ್ರಗ್ಸ್ ವಿಚಾರದಲ್ಲಿ ಸಾಕಷ್ಟು ಸುದ್ಧಿಯಾಗುತ್ತಿದೆ. ಈ ಸಂಬಂಧ ಅರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಡ್ರಗ್ಸ್ ದಂಧೆ ಕುರಿತು ಮಾತನಾಡಿದ ಶಾಸಕ ತನ್ವೀರ್ ಸೇಠ್,  ಡ್ರಗ್ಸ್ ದಂಧೆಯಲ್ಲಿ ಸಿನಿಮಾ ತಾರೆಗಳು ,ಉದ್ಯಮಿಗಳು, ರಾಜಕಾರಣಿಗಳ ಹೆಸರು  ಕೇಳಿ ಬರುತ್ತಿದೆ. ನುರಿತ ನ್ಯಾಯಾಧೀಶರನ್ನು ತನಿಖೆಗೆ ಸರ್ಕಾರ ನೇಮಕ ಮಾಡಿದೆ. ಆರೋಪಗಳನ್ನ ಯಾರು ಬೇಕಾದರು ಮಾಡಬಹುದು. ಅರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಯುವ ಪೀಳಿಗೆ ಜತೆಗೆ ಈ ದೇಶದ ಭವಿಷ್ಯದ ಪ್ರಶ್ನೆ ಇದು. ಹೀಗಾಗಿ ದಂಧೆಯಲ್ಲಿ ಯಾರೇ ಇರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಕುರಿತು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.drugs-mafia-alleged-mysore-mla-tanveer-sait

ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಇಲ್ಲಿ ರಾಜಕಾರಣ ಮಾಡೋದು ಬೇಡಾ. ಯಾವ ಜಾತಿಯಲ್ಲಾದರೂ ಹುಟ್ಟಿರಲಿ. ಡ್ರಗ್ಸ್ ವಿಚಾರದಲ್ಲಿ ಕ್ಷಮೆ ಇಲ್ಲ.  ಯಾರ ಮೇಲೂ ಬೆರಳು ತೋರಿಸಬಾರದು. ಸತ್ಯ ಶೋಧನೆ ಪ್ರತಿಯೊಬ್ಬರು ಮಾಡಿಕೊಳ್ಳಲಿ. ಯಾರೇ ಮಾಡಿದರೂ ತಪ್ಪೆ. ಈ ವಿಚಾರದಲ್ಲಿ ರಾಜಕಾರಣ ಜಾತಿ ಬೇಡ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಬೇಕು ಎಂದರು.

Key words: Drugs mafia-alleged – Mysore-MLA-Tanveer Sait