ಬ್ಲಾಕ್ ಫಂಗಸ್ ಗೆ ಔಷಧ ಕೊರತೆ: ರೋಗಿಗಳ ಜೀವ ಹಿಂಡುತ್ತಿದೆ- ಸರ್ಕಾರಕ್ಕೆ ಮಣಿಪಾಲ್ ಆಸ್ಪತ್ರೆ ವೈದ್ಯ ಎಚ್ಚರಿಕೆ.

ಬೆಂಗಳೂರು,ಜೂ,1,2021(www.justkannada.in):  ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಜೀವವನ್ನೇ ಹಿಂಡುತ್ತಿದೆ. ಔಷಧ ಕೊರತೆಯಿಂದಾಗಿ ಈ ಸಮಸ್ಯೆ ಸೃಷ್ಠಿಯಾಗಿದೆ. ಇದು ಹೀಗೇ ಮುಂದುವರೆದರೆ ರೋಗಿಗಳ ಸಾವು ಖಚಿತ ಎಂದು ಮಣಿಪಾಲ್ ಆಸ್ಪತ್ರೆ ತಜ್ಞ ವೈದ್ಯ ಡಾ.ರಘುರಾಜ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಮಣಿಪಾಲ್ ಆಸ್ಪತ್ರೆ ತಜ್ಞವೈದ್ಯ ಡಾ.ರಘುರಾಜ್ ಹೆಗಡೆ,  ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ರೋಗಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.  ಎಂಪೊಟೆರಿಸನ್ ಬಿ ಔಷಧ ಕೊರತೆಯಿಂದ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾಗಿವೆ. ಇದು ಹೀಗೆ ಮುಂದುವರೆದರೆ ರೋಗಿಗಳು ಸಾವನ್ನಪ್ಪುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಡ್ ಗಳು ಸಿಗುವುದಿಲ್ಲ. ಅದ್ದರಿಂದ ರಾಜ್ಯ ಸರ್ಕಾರ ತಕ್ಷಣ ಔಷಧ ತರಿಸಿಕೊಡಬೇಕು, ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕಳೆದ ವಾರ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದ ರೋಗಿಯ ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದೇವೆ. ಇದೀಗ ಮತ್ತೊಂದು ಕಣ್ಣಿಗೂ ಫಂಗಸ್ ತಗುಲಿದೆ. ಈಗ ಆ ರೋಗಿಯ ಮೆದುಳಿಗೂ ಫಂಗಸ್ ಆವರಿಸಿಕೊಳ್ಳುತ್ತಿದೆ. ಔಷಧ ಕೊರತೆಯೇ ಸಮಸ್ಯೆಗೆ ಕಾರಣವಾಗಿದೆ. ಈ ವಿಷಯವನ್ನು ರೋಗಿಯ ಕುಟುಂಬದವರಿಗೆ  ಹೇಗೆ ತಿಳಿಸಲಿ ಎಂದು ವೈದ್ಯ ಡಾ.ರಘುರಾಜ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.

Key words: Drug -shortage – black fungus- Manipal hospital -doctor –warned- govt.