ಕೋವಿಡ್-19 ಗೆ ಇಂದು ಔಷಧಿ ಬಿಡುಗಡೆ…

Promotion

ಮೈಸೂರು,ಆ,4,2020(www.justkannada.in):  ನೊಯಿಡಾ ಮೂಲದ ಜುಬಿಲೆಂಟ್ ಲೈಫ್ ಸೈನ್ಸ್ ಲಿಮಿಟೆಡ್  ಕೋವಿಡ್ -19ಗೆ ಜುಬಿ-ಆರ್(JUBI-R)  ಬ್ರಾಂಡ್ ನಡಿ ಔಷಧಿಯನ್ನ ಇಂದು ಬಿಡುಗಡೆ ಮಾಡುತ್ತಿದೆ.drug-release-today-kovid-19-mysore

ಕೋವಿಡ್-19 ರೋಗಿಗಳಿಗಾಗಿ ಸಿದ್ಧವಾಗಿರುವ ಈ ಔಷಧಿ 100 ಎಂಜಿ ಇಂಜಕ್ಷನ್ ಗೆ ಭಾರತೀಯ ಮಾರುಕಟ್ಟೆಯಲ್ಲಿ 4,700 ರೂ ಬೆಲೆ ನಿಗದಿಪಡಿಸಲಾಗಿದೆ. ಮೊದಲ ಬಾರಿಗೆ ದೇಶದ 1000 ಆಸ್ಪತ್ರೆಗಳಿಗೆ ಈ ಔಷಧಿಯನ್ನ ಇಂದು ವಿತರಿಸಲಾಗುತ್ತದೆ. ಈ ಔಷಧಿ ಮಾಹಿತಿಗಾಗಿ ಸಂಸ್ಥೆ 24 ಗಂಟೆಗಳ ಸಹಾಯವಾಣಿ ಆರಂಭಿಸಿದೆ.

ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಕೋವಿಡ್-19 ಔಷಧಿಯನ್ನ ತಲುಪಿಸುವ ದೃಷ್ಠಿಯಿಂದ ಲಾಭರಹಿತವಾಗಿ  ಜುಬುಲೆಂಟ್ ಸಮೂಹ ಸಂಸ್ಥೆ ಜುಬಿಲೆಂಟ್ ಭಾರ್ತೀಯ ಫೌಂಡೇಷನ್ ಸಿಬ್ಬಂದಿ ವರ್ಗ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.drug-release-today-kovid-19-mysore

ನೊಯಿಡಾ ಮೂಲದ ಈ ಕಂಪನಿ ಮೈಸೂರಿನ ನಂಜನಗೂಡಿನಲ್ಲಿ ಜುಬಿಲೆಂಟ್ ಜೆನರಿಕ್ ಲಿಮಿಟೆಡ್ ಸಂಸ್ಥೆಯನ್ನ ಹೊಂದಿದೆ. ಕೋವಿಡ್ 19 ರ ಜುಬಿ-ಆರ್  ಇಂಜೆಕ್ಷನ್ ಈಗಾಗಲೇ ಅಮೇರಿಕಾದಲ್ಲಿ ಬಳಸಲಾಗುತ್ತಿದೆ.  ಅಲ್ಲೂ 100 ಎಂಜಿಯ ಇಂಜೆಕ್ಷನ್ ದರ 40 ಸಾವಿರ ರೂಗಳಾಗಿದೆ.

Key words: Drug -release -today – Kovid-19-mysore