ಡ್ರಿಂಕ್ ಅಂಡ್ ಡ್ರೈವ್: ಕಾರು ಚಾಲಕನಿಗೆ ಬಿತ್ತು ಹತ್ತು ಸಾವಿರ ರೂ. ದಂಡ…

Promotion

ಮೈಸೂರು,ಸೆ,10,2019(www.justkannada.in): ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರು ಚಾಲಕನಿಗೆ ನ್ಯಾಯಾಲಯದಲ್ಲಿ  ಹತ್ತು ಸಾವಿರ ದಂಡ ವಿಧಿಸಲಾಗಿದೆ.

ಬೀಚನಹಳ್ಳಿ ಮೂಲದ ಚಾಲಕ ಕಳೆದ‌ ಎರಡು ದಿನಗಳ ಹಿಂದಷ್ಟೆ ಹ್ಯಾಂಡ್ ಪೋಸ್ಟ್ ಬಳಿ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದನು. ಈ ವೇಳೆ ಎಚ್.ಡಿ ಕೋಟೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ನಾಯಕ್  ತಪಾಸಣೆ ನಡೆಸಿ ವಾಹನ ವಶಕ್ಕೆ ತೆಗೆದುಕೊಂಡು‌ ಪ್ರಕರಣ ದಾಖಲಿಸಿದ್ದರು.

ಇದೀಗ ಸಂಚಾರಿ ನಿಯಮ ಉಲ್ಲಂಘನೆಗೆ ನೂತನ ದರದಂತೆ ಮದ್ಯ ಸೇವನೆ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಗೆ 10ಸಾವಿರ‌ ದಂಡ ವಿಧಿಸಲಾಗಿದೆ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಹಮ್ಮದ್ ಶಾಹಿದ್ ಚೌತಾಯಿ ದಂಡ ವಿಧಿಸಿದ್ದಾರೆ.

Key words: Drink and Drive-car driver –Fine-ten thousand-mysore