ಬಹಳ ಕನಸು ಇಟ್ಕೊಂಡು ಅವರನ್ನ ಮದುವೆಯಾಗಿದ್ದೆ: ದಿ. ಡಿ.ಕೆ ರವಿ ಅವರನ್ನ ನೆನೆದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರು…

Promotion

ಬೆಂಗಳೂರು,ಅಕ್ಟೋಬರ್,31,2020(www.justkannada.in):  ಆರ್.ಆರ್ ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಅವರು ಇಂದು ತಮ್ಮ ಪತಿ ದಿ. ಡಿ.ಕೆ ರವಿ ಅವರನ್ನ ನೆನೆದು ಕಣ್ಣೀರು ಹಾಕಿದ ಘಟನೆ ನಡೆಯಿತು.jk-logo-justkannada-logo

ಆರ್.ಆರ್ ನಗರ ಚುನಾವಣಾ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು ಈ ನಡುವೆ ಇಂದು ಕ್ಷೇತ್ರದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಬಹಳ ಕನಸನ್ನ ಇಟ್ಟುಕೊಂಡು ಅವರನ್ನ ಮದುವೆಯಾಗಿದ್ದೆ. ಆದರೆ ಸಣ್ಣ ಸುಳಿವನ್ನು ನೀಡದೇ ಹೊರಟು ಹೋದರು. ನನ್ನ ಸಮಸ್ಯೆಯಿಂದ ಮೃತಪಟ್ಟರಾ..? ಇಂತಹದೊಂದು ಗಿಲ್ಟ್ ನನ್ನನ್ನ ಕಾಡುತ್ತಿದೆ ಎಂದು ಕಣ್ಣೀರು ಹಾಕಿದರು.

ಹಾಗೆಯೇ ಪತಿ ಡಿ.ಕೆ ರವಿ ಅವರ ಹೆಸರು ಬಳಸಬಾರದು ಎಂದಿದ್ದ ವಿಪಕ್ಷಗಳ ಟೀಕೆಗೆ ಅಸಮಾಧಾನ ವ್ಯಕ್ತಪಡಿಸಿದ ಕುಸುಮಾ ಅವರು ಪತಿ ಹೆಸರು ನಾನು ಬಳಸದೇ ಮತ್ಯಾರು ಬಳಸಬೇಕು ಎಂದು ಪ್ರಶ್ನಿಸಿದರು.dream-married-him-rr-nagar-congress-candidate-kusuma-tears-dk-ravi

ಹಾಗೆಯೇ ಎಲ್ಲಾ ಸಮಯದಲ್ಲಿ ಕಣ್ಣೀರು ಹಾಕಲು ಆಗಲ್ಲ. ಈಗ ಜನರ ಕಣ್ಣೀರು ಒರೆಸಲು ಬಂದಿದ್ದೇನೆ.  ಜನರ ನೋವಿನ ಮುಂದೆ ನನ್ನ ನೋವು ಏನು ಇಲ್ಲ ಎಂದು ಕುಸುಮಾ ಅವರು ತಿಳಿಸಿದರು.

Key words: dream -married – him-RR nagar-Congress candidate -Kusuma – tears -DK Ravi.