ಖ್ಯಾತ ಐದು ರೂಪಾಯಿ ಡಾಕ್ಟರ್ ಎಸ್.ಸಿ ಶಂಕರೇಗೌಡರಿಗೆ ಹೃದಯಾಘಾತ.

Promotion

ಮೈಸೂರು,ಮೇ,24,2022(www.justkannada.in): ಮಂಡ್ಯದ ಖ್ಯಾತ ಐದು ರೂಪಾಯಿ ಡಾಕ್ಟರ್ ಎಸ್.ಸಿ ಶಂಕರೇಗೌಡ ಅವರಿಗೆ  ಹೃದಯಾಘಾತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಲಘು ಹೃದಯಾಘಾತ ಹಿನ್ನೆಲೆ, ಶಂಕರೇಗೌಡ ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದು, ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆ ಇದೆ.

ಡಾ. ಶಂಕರೇಗೌಡರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಶಂಕರೇಗೌಡ ಅವರು ಜಿಲ್ಲಾ ಪಂಚಾಯತ್ ನ  ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Key words: Dr. SC Shankargowda- five-rupee- doctor-heart attack.