ಡಬಲ್ ಆಯ್ತು ‘ಕಿರಿಕ್’ ರಶ್ಮಿಕಾ ಸಂಭಾವನೆ !

Promotion

ಬೆಂಗಳೂರು, ಜನವರಿ 04, 2020 (www.justkannada.in): ಅಲ್ಲು ಅರ್ಜುನ್ ರವರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಏನೆಂದರೆ ಈ ಚಿತ್ರಕ್ಕಾಗಿ ಭಾರಿ ಸಂಭಾವನೆ ರಶ್ಮಿಕಾಗೆ ಸಿಕ್ಕಿದೆಯಂತೆ!

ಇತ್ತೀಚಿನ ಸಿನಿಮಾಗಳಿಗೆ 1 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಅವರು ಚಿತ್ರಗಳಿಗೆ ಪಡೆಯುವಂತಹ ಸಂಭಾವನೆ 2 ಕೋಟಿ ರೂ.ಗೆ ಏರಿಕೆಯಾಗಿದೆ.

ಆಕ್ಷನ್ ಚಿತ್ರ ಪುಷ್ಪಾದ ಇತ್ತೀಚಿನ ಫೋಟೋ ನೋಡಿ ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಜತೆಗೆ ರಶ್ಮಿಕಾ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.