ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ: ಮುನ್ನೆಚ್ಚರಿಕೆ ವಹಿಸಿ, ನಿಯಮಗಳನ್ನು ಅನುಸರಿಸಿ- ಸಿಎಂ ಬಿಎಸ್ ವೈ ಮನವಿ.

kannada t-shirts

ಬೆಂಗಳೂರು,ಜೂನ್,21,2021(www.justkannada.in): ಕೊರೋನಾ ಇಳಿಮುಖವಾದ ಹಿನ್ನೆಲೆ ಮೈಸೂರು ಜಿಲ್ಲೆ ಹೊರತು ಪಡಿಸಿ ರಾಜ್ಯಾದ್ಯಂತ ಇಂದಿನಿಂದ ಅನ್ ಲಾಕ್ ಮಾಡಲಾಗಿದ್ದು, ಈ ನಡುವೆ ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸದೆ: ಮುನ್ನೆಚ್ಚರಿಕೆ ವಹಿಸಿ, ನಿಯಮಗಳನ್ನು ಅನುಸರಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ,  ಆತ್ಮೀಯ ನಾಗರಿಕ ಬಂಧುಗಳೇ, ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು, ಜಿಲ್ಲಾವಾರು ಪರಿಸ್ಥಿತಿಗಳನ್ನು ಪರಿಗಣಿಸಿ, ಅದಕ್ಕನುಗುಣವಾಗಿ ಸಡಿಲಿಸಲಾಗುತ್ತಿದೆ. ಸಾಮಾನ್ಯ ಜನಜೀವನಕ್ಕೆ ಅನುಕೂಲ ಕಲ್ಪಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಸೋಂಕಿನ ಅಪಾಯದ ಕುರಿತು ನಿರ್ಲಕ್ಷ್ಯ ಖಂಡಿತಾ ಬೇಡ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಹಾಗೆಯೇ ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ. ಹೊರಗೆ ಬರುವಾಗ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ಶುಚಿತ್ವ ಪಾಲಿಸಿ, ಸರದಿ ಬಂದಾಗ ಲಸಿಕೆ ಪಡೆದುಕೊಳ್ಳಿ. ಮುನ್ನೆಚ್ಚರಿಕೆ ವಹಿಸಿ, ನಿಯಮಗಳನ್ನು ಅನುಸರಿಸಿ, ಸರ್ಕಾರದೊಂದಿಗೆ ಸಹಕರಿಸಿ. ನಾವೆಲ್ಲರೂ ಒಗ್ಗಟ್ಟಿನಿಂದ ಕೊರೋನಾ ಹಿಮ್ಮೆಟ್ಟಿಸೋಣ ಎಂದು  ಸಿಎಂ ಬಿಎಸ್ ವೈ ಸಲಹೆ ನೀಡಿದ್ದಾರೆ.

ENGLISH SUMMARY….

CM BSY appeals people not to neglect Coronavirus and follow precautionary measures compulsorily
Bengaluru, June 21, 2021 (www.justkannada.in): The first phase of lifting the lockdown across the state has commenced except a few districts including Mysuru. Meanwhile, Chief Minister B.S. Yedyurappa has appealed to the people of the State not to neglect Coronavirus and compulsorily follow all the precautionary measures.
In his tweet, the Chief Minister has informed that the lockdown is being lifted depending upon the condition of the respective districts. This decision is taken keeping in mind to restore normalcy. Anyway please do not neglect the pandemic.
The tweet also reads that “Try o stay at home as far as possible and follow all the guidelines compulsorily. Please wear a mask when going out and maintain social distancing and maintain personal cleanliness. Avail vaccination whenever available and cooperate with the government. Let us all fight together against the pandemic.”
Keywords: Chief Minister B S Yedyurappa/ appeal/ don’t neglect Coronavirus/ unlock/

Key words: Don’t-neglect- Corona- follow -covid rules- CM BS Yeddyurappa

website developers in mysore