ಮಗಳ ಮದುವೆ ಚಿತ್ರೀಕರಣಕ್ಕೆ ಬರಬೇಡಿ: ಮಾಧ್ಯಮಗಳಿಗೆ ಕ್ರೇಜಿಸ್ಟಾರ್ ಮನವಿ

Promotion

ಬೆಂಗಳೂರು, ಮೇ, 18, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಅದ್ದೂರಿ ಮದುವೆಯಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸಲಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸಲಿದ್ದಾರೆ.

ಮಗಳ ಮದುವೆಗೆ ಯಾರೂ ಉಡುಗೊರೆಯಾಗಿ ಹೂಗುಚ್ಛ ತರಬೇಡಿ ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ. ಹೂಗುಚ್ಛದ ಬದಲಿಗೆ ವೋಚರ್ ತೆಗೆದುಕೊಂಡು ಬಂದರೆ ಅದನ್ನು ಅನಾಥಾಶ್ರಮಗಳಿಗೆ ತಲುಪಿಸುವುದಾಗಿ ಹೇಳಿದ್ದಾರೆ.

ಜತೆಗೆ ದೃಶ್ಯ ಮಾಧ್ಯಮಗಳಿಗೂ ಮದುವೆ ಚಿತ್ರೀಕರಣಕ್ಕೆ ಬರಬೇಡಿ. ನಾವೇ ಚಿತ್ರೀಕರಣ ಮಾಡಿ ಅದನ್ನು ನಿಮ್ಮ ಕಚೇರಿಗೆ ತಲುಪಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.