ಡಾನ್ ಬ್ರಾಡ್ಮನ್ ದಾಖಲೆ ಮುರಿದ ‘ಹಿಟ್ ಮ್ಯಾನ್’

Promotion

ಬೆಂಗಳೂರು, ಅಕ್ಟೋಬರ್ 21, 2019 (www.justkannada.in): ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರು 71 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಭಾರತದ ರೋಹಿತ್ ಶರ್ಮಾ ಮುರಿದಿದ್ದಾರೆ..

ಡಾನ್ ತಮ್ಮ ತವರಿನ ನೆಲದಲ್ಲಿ ಆಡಿದ್ದ ಸತತ ಹತ್ತು ಟೆಸ್ಟ್‌ಗಳಿಂದ 98.22ರ ಸರಾಸರಿಯಲ್ಲಿ ರನ್‌ ಗಳಿಸಿದ್ದರು. ದಕ್ಷಿಣ ಆಫ್ರಿಕಾ ಎದುರು ದ್ವಿಶತಕ ಬಾರಿಸಿದ ರೋಹಿತ್ ಭಾರತದಲ್ಲಿ ಆಡಿದ ಹತ್ತು ಪಂದ್ಯಗಳಲ್ಲಿ 99.84 ಸರಾಸರಿಯಲ್ಲಿ ರನ್‌ ಸೇರಿಸಿದ್ದಾರೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ಟ್ರಿಪಲ್ ಸಾಧಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಇನ್ನೂರರ ಗಡಿ ದಾಟಿಯೇ ಬಿಟ್ಟರು.