ಡಿಕೆಶಿ ಜೈಲಿಗೆ ಕಳುಹಿಸಿದ ಬಿಜೆಪಿಗೆ ಒಕ್ಕಲಿಗರು ಮತ ಹಾಕಬೇಡಿ- ಪ್ರೊ. ಮಹೇಶ್ ಚಂದ್ರಗುರು….

Promotion

ಮೈಸೂರು,ಅ,25,2019(www.justkannada.in):  ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನ  ಜೈಲಿಗೆ ಕಳುಹಿಸಿದ ಬಿಜೆಪಿಗೆ ಒಕ್ಕಲಿಗರು  ವೋಟ್  ಹಾಕಬಾರದು. ಮುಸ್ಲಿಮರು ದಲಿತರು  ಕೋಮುವಾದಿ ಬಿಜೆಪಿಯನ್ನ ತಿರಸ್ಕರಿಸಿ ಎಂದು ಪ್ರೊ.ಮಹೇಶ್ ಚಂದ್ರಗುರು ತಿಳಿಸಿದರು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಒಕ್ಕಲಿಗರಿಗೆ  ಸ್ವಾಭಿಮಾನ  ಇದ್ರೆ  ಮುಂದೆ ಬಿಜೆಪಿಗೆ ಮತವನ್ನ ಹಾಕಬೇಡಿ. ಡಿಕೆ  ಶಿವಕುಮಾರ್ ರನ್ನ  ಇಡಿ ಅಸ್ತ್ರ ಬಳಸಿ  ಜೈಲಿಗೆ  ಕಳುಹಿಸಿದ್ರು. ಈಗ  ಅವರಿಗೆ ಬೈಲ್  ಸಿಕ್ಕಿ ಬಿಡುಗಡೆಗೊಂಡಿದ್ದಾರೆ,  ಅದಕ್ಕೆ ನಾನು ಡಿಕೆ  ಶಿವಕುಮಾರ್ ರನ್ನ  ಅಭಿನಂದಿಸುತ್ತೇನೆ. ಬಿಜೆಪಿಗೆ ತಕ್ಕ  ಪಾಠ ಕಲಿಸಬೇಕು ಅಂದ್ರೆ ಚುನಾವಣೆಯಲ್ಲಿ ಮತ ನೀಡಬಾರದು. ಮುಸ್ಲಿಮರಿಗೂ ಸ್ವಾಭಿಮಾನ  ಇದ್ದಾರೆ ಬಿಜೆಪಿ ಗೆ ಮತ  ಹಾಕಬೇಡಿ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಯುಗಾಂತ್ಯ  ಹರಿಯಾಣ  ಮಹಾರಾಷ್ಟ್ರ ಚುನಾವಣೆ ಮೂಲಕ  ಶುಭಾರಂಭವಾಗಿದೆ. ರಾಜ್ಯದಲ್ಲಿಯೂ  ಯಡಿಯೂರಪ್ಪರನ್ನ ಆರ್ ಎಸ್  ಎಸ್ ನವರು ಟಚ್ ಮಾಡಿದ್ರೆ ಮತ್ತೇ ನಾಳೆಗೆ  ಸರ್ಕಾರ ಬಿದ್ದೋಗುತ್ತೆ. ಮುಂದಿನ ಚುನಾವಣೆಯಲ್ಲಿ ಇದಕ್ಕೆಲ್ಲ ತಕ್ಕ ಉತ್ತರ ಸಿಗಲಿದೆ ಎಂದು ಪ್ರೊ. ಮಹೇಶ್ ಚಂದ್ರಗುರು ತಿಳಿಸಿದರು.

ಇದೇ ವೇಳೆ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ದ ವಾಗ್ದಾಳಿ ನಡೆಸಿದ ಮಹೇಶ್ ಚಂದ್ರ ಗುರು, ಸಂಸದ ಪ್ರಸಾದ್  ಒಬ್ಬ  ಆಕಸ್ಮಿಕ ಸಂಸದ. ಮೊದಲು ಅಂಬೇಡ್ಕರ್ ವಾದಿಯಾಗಿದ್ದ ಪ್ರಸಾದ್ ಈಗ  ಅವಕಾಶವಾದಿಯಾಗಿದ್ದಾರೆ. ಬಸವಲಿಂಗಪ್ಪ,  ದೇವರಾಜು ಅರಸು  ಅವರ ನೇತೃತ್ವದಲ್ಲಿ ನಡೆದ  ದಲಿತ  ಚಳುವಳಿಯಲ್ಲಿ ಜನಿಸಿದ ಶಿಶು  ಶ್ರಿನಿವಾಸ್  ಪ್ರಸಾದ್. ಜೀವನದ  ಮುಸ್ಸಂಜೆಯಲ್ಲಿ ಮನುವಾದಿಗಳ ಜೊತೆ ಕೈ ಜೋಡಿಸುವ  ಮೂಲಕ  ರಾಜಕೀಯವಾಗಿ ಪಡೆದುಕೊಂಡಿದ್ದಕ್ಕಿಂತ ಸಾಮಾಜಿಕವಾಗಿ ಕಳೆದುಕೊಂಡಿದ್ದೆ ಹೆಚ್ಚು. ಸಾರ್ವರ್ಕರ್ ಗೆ  ಭಾರತ ರತ್ನ ನೀಡಿರುವ ಕುರಿತು ಶ್ರಿನಿವಾಸ್  ಪ್ರಸಾದ್  ಒಲ್ಲದ ಮನಸ್ಸಿನಲ್ಲಿ ಪಕ್ಷದ ಬೆಂಬಲಕ್ಕೆ ನಿಂತು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

Key words: Do not -vote -BJP –dk shivakumar-jail- mysore- Pro. Mahesh Chandraguru.