ತನಿಖೆಯಾಗುವವರೆಗೂ ಅತ್ಯಾಚಾರ ಪದ ಬಳಸಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ…

Promotion

ಬೆಳಗಾವಿ,ಮಾರ್ಚ್,23,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಯುವವರೆಗೂ ಅತ್ಯಾಚಾರ ಪದ ಬಳಸಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.jk

ಪ್ರಕರಣಕ್ಕೆ ಸಂಬಂದಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದುಯ ಕಾಂಗ್ರೆಸ್ ಆಗ್ರಹಿಸಿ ಸದನದಲ್ಲಿ ಇಂದು ಪ್ರತಿಭಟನೆ ನಡಸಿತು. ಈ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ತನಿಖೆ ಮುಗಿಯುವವರೆಗೂ ಅತ್ಯಾಚಾರ ಪದ ಬಳಸಬೇಡಿ ಎಂದು ಮನವಿ ಮಾಡಿದ್ದಾರೆ.Do not -use – word- rape-. MLA -Balachandra jarakiholi

ಯುವತಿ ಸ್ವಇಚ್ಚೆಯಿಂದ ಹೇಳಿಕೆ ನೀಡಿದ್ದಾಳೆಯೇ ಒತ್ತಾಯದಿಂದ ಹೇಳಿಕೆ ನೀಡಿದ್ದಾಳೆಯೇ ಗೊತ್ತಿಲ್ಲ. ಸಿಡಿ ಅಸಲಿಯೋ ನಕಲಿಯೋ ಗೊತ್ತಿಲ್ಲ. ನ್ಯಾಯಾಂಗ ತನಿಖೆ ವರ್ಷಗಟ್ಟಲೇ ನಡೆಯುತ್ತದೆ. ಎಸ್ ಐಟಿ ತನಿಖೆ ಬೇಗ ಮುಗಿಯುತ್ತದೆ. ಬೇಗ ಮುಗಿದರೇ ಒಳ್ಳೆಯದು ಎಂದರು.

Key words: Do not -use – word- rape-. MLA -Balachandra jarakiholi