ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಇಲ್ಲಸಲ್ಲದ ಆರೋಪ ಮಾಡಬೇಡಿ: ಎಚ್.ವಿ.ರಾಜೀವ್, ಕೌಟಿಲ್ಯ ರಘು

ಮೈಸೂರು: ಕೊರೊನಾ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಯಾರೂ ಆರೋಪ ಮಾಡಬಾರದು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಂಚಾಲಕ ಎಚ್.ವಿ.ರಾಜೀವ್, ಆರ್.ರಘು ಕೌಟಿಲ್ಯ, ಅಪ್ಪಣ್ಣ ಮತ್ತು ಎಲ್.ಆರ್.ಮಹದೇವಸ್ವಾಮಿ ಮನವಿ ಮಾಡಿದರು.

ಮುಡಾ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಲ್ವರು, ಪ್ರತಿಪಕ್ಷಗಳ ನಾಯಕರ ನಡೆಗೆ ವಿರೋಧ ವ್ಯಕ್ತಪಡಿಸಿದರು. ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕಿದೆ. ಇಲ್ಲ ಸಲ್ಲದ ಆರೋಪಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಲಸಿಕೆ ಹಾಕಿಸುವಾಗ ಮೊದಲು ಅಪಪ್ರಚಾರ ಮಾಡಿದವರು ಕಾಂಗ್ರೆಸ್ ನಾಯಕರು. ಈಗ ಲಸಿಕೆ ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಸರಕಾರಕ್ಕೆ ಸಹಕರಿಸುವ ಸಮಯದಲ್ಲಿ ಟೀಕೆ ಮಾಡುತ್ತಿರುವುದು ಸರಿಯೇ? ಕೋವಿಡ್ ನಿಯಂತ್ರಣಕ್ಕೆ ನಿಮ್ಮ ಕ್ರಮಗಳೇನು? ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ಮಾಡಿದ್ದೀರಾ?’’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಆರ್.ರಘು ಪ್ರಶ್ನಿಸಿದ್ದಾರೆ.  ಸಾ.ರಾ.ಮಹೇಶ್ ಅವರು ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿ, ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ನಿರಂತರವಾಗಿ ಟಾರ್ಗೆಟ್ ಮಾಡಿ ನೈತಿಕತೆ ಕುಂದಿಸುವುದು ಬೇಡ  ಎಂದರು.

ಮುಡಾ ಅಧ್ಯಕ್ಷ ಹಾಗೂ ಬೆಡ್ ನಿರ್ವಹಣೆಗಳ ಸಂಚಾಲಕ ಎಚ್.ವಿ.ರಾಜೀವ್ ಮಾತನಾಡಿ,  ವಿರೋಧ ಮಾಡಲು ಇದು ಸಕಾಲವಲ್ಲ. ಜಿಲ್ಲೆಯಲ್ಲಿ ಬೆಡ್ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ರೀತಿಯ ವರ್ತನೆ ಅತ್ಯಂತ ವಿಷಾದನೀಯ’’ ಎಂದು ಹೇಳಿದರು.Do not make unnecessary allegations against officials, staff: HV Rajeev, Kautilya Raghu