ಡಿ.ಕೆ ಶಿವಕುಮಾರ್ ಗೆ ಮತ್ತೆ ಶಾಕ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ,ಸೆಪ್ಟಂಬರ್,19,2022(www.justkannada.in): ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್  ವಿರುದ್ಧದ  ಪ್ರಕರಣ ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ಈ ಮೂಲಕ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ಧ ಡಿ,ಕೆ ಶಿವಕುಮಾರ್ ಮತ್ತೊಂದು ಶಾಕ್ ತಟ್ಟಿದೆ. 2018ರಲ್ಲಿ ಡಿಕೆ ಶಿವಕುಮಾರ್ ಬಳಿ ಈಗಲ್‌ಟನ್ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳಿಂದ ದಾಖಲೆ ಜಪ್ತಿ ಮಾಡಲಾಗಿತ್ತು. ಡಿಕೆ ಶಿವಕುಮಾರ್  ಇದ್ದ ರೂಂನಲ್ಲಿ ಹಣಕಾಸು ವರ್ಗಾವಣೆ ದಾಖಲೆ ವಶ ಪಡಿಸಿಕೊಳ್ಳಲಾಗಿತ್ತು. ಐಟಿ ಇಲಾಖೆ ಅಧಿಕಾರಿಗಳ ತನಿಖೆಗೆ ಹೈಕೋರ್ಟ್‌ ತಡೆ ನೀಡಿದ್ದು, ಡಿ.ಕೆ.ಶಿವಕುಮಾರ್‌ ವಿರುದ್ಧದ ಕೇಸ್​  ವಜಾಗೊಳಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಐಟಿ ಇಲಾಖೆ  ‘ಸುಪ್ರೀಂ ಕೋರ್ಟ್’ ಮೊರೆ ಹೋಗಿತ್ತು. ಐಟಿ ಇಲಾಖೆಯ ಅರ್ಜಿ ವಿಚಾರಣೆ ನಡೆಸಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಡಿ.ಕೆ ಶಿವಕುಮಾರ್​ಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಲಾಗಿದೆ.  ಐಟಿಗೆ ನಾಲ್ಕು ವಾರಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಆರು ವಾರಗಳಿಗೆ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ಮುಂದೂಡಿದೆ.

Key words: DK Shivakumar-Supreme Court- stay- High Court -order