ಡಿಕೆಶಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ: ಪಕ್ಷದ ವೇದಿಕೆಯಲ್ಲೇ ಚರ್ಚಿಸುತ್ತೇನೆ- ಎಂ.ಬಿ ಪಾಟೀಲ್.

Promotion

ವಿಜಯಪುರ,ಮೇ,11,2022(www.justkannada.in): ರಕ್ಷಣೆಗಾಗಿ ಎಂ.ಬಿ ಪಾಟೀಲ್ ಅವರನ್ನ ಸಚಿವ ಅಶ್ವಥ್ ನಾರಾಯಣ್ ಭೇಟಿಯಾಗಿದ್ದರು ಎಂದು ಹೇಳಿಕೆ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಎಂ.ಬಿ ಪಾಟೀಲ್, ಡಿಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದು ಸರಿಯಾದುದ್ದು ಅಲ್ಲ . ನಾನು ಇದನ್ನ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಅವರ ಹೇಳಿಕೆಯನ್ನ ಪಕ್ಷದ ವೇದಿಕೆಯಲ್ಲೇ ಚರ್ಚಿಸುತ್ತೇನೆ. ಯಾರ್ ಮನೆಗೆ ಊಟಕ್ಕೆ ಹೋಗ್ತಾರೆ ಅನ್ನೋದು ನಾನ್ಸೆನ್ಸ್.  ಯಾರು ಯಾರ ಮನೆಗೆ ಹೋಗಿದ್ದಾರೆ ನನಗೆ ಗೊತ್ತಿದೆ. ಈ ಬಗ್ಗೆ ನಾನು ಬಹಳಷ್ಟು ಉದಹಾರಣೆ ಕೊಡುತ್ತೇನೆ ಎಂದು ಕಿಡಿಕಾರಿದರು.

Key words: DK Shivakumar-statement – not correct-M.B Patil.