ಡಿಕೆಶಿ-ಸಿದ್ಧರಾಮಯ್ಯ ಯಾವ ಕಾಲಕ್ಕೂ ಒಂದಾಗಲ್ಲ: ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ-ಬಾಬೂರಾವ್ ಚಿಂಚನಸೂರ್.

Promotion

ಯಾದಗಿರಿ,ಆಗಸ್ಟ್,13,2022(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಯಾವಕಾಲಕ್ಕೂ ಒಂದಾಗಲ್ಲ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿ ಮುಖಂಡ ಬಾಬೂರಾವ್ ಚಿಂಚನಸೂರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಾಬೂರಾವ್ ಚಿಂಚನಸೂರ್, ರಾಜ್ಯ ಕಾಂಗ್ರೆಸ್ ಒಡೆದು ನಾಲ್ಕು ಗುಂಪುಗಳಾಗಿವೆ. ಡಿಕೆ ಶಿವಕುಮಾರ್ ಗುಂಪು, ಸಿದ್ಧರಾಮಯ್ಯ ಗುಂಪು, ಮಲ್ಲಿಕಾರ್ಜುನ ಖರ್ಗೆ ಗುಂಪು ಹಾಗೂ ಡಾ.ಜಿ ಪರಮೇಶ್ವರ್ ಗುಂಪುಗಳಿವೆ. ಈ ಗುಂಪುಗಾರಿಕೆಯಲ್ಲೇ ಕಾಂಗ್ರೆಸ್ ನಾಶವಾಗಲಿದೆ ಎಂದು ಭವಿಷ್ಯ ನುಡಿದರು.

ಮಹಿಳೆಯರ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನ ಖಂಡಿಸಿದ ಬಾಬೂರಾವ್ ಚಿಂಚನಸೂರ್, ಮಹಿಳೆಯರ  ಬಗ್ಗೆ ಅಗೌರವದಿಂದ ಮಾತನಾಡಬಾರದು. ಪ್ರಿಯಾಂಕ್ ಖರ್ಗೆ  ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Key words: DK shivakumar-Siddaramaiah –  Congress –bjp leader-Baburao Chinchansur.