ಡಿಕೆಶಿ, ಸಿದ್ಧರಾಮಯ್ಯ ಸ್ಪರ್ಧೆಯಲ್ಲಿರಬೇಕಾದ್ರೆ ಕೇಂದ್ರ ಬಜೆಟ್ ವಿರೋಧಿಸಲೇಬೇಕು- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ….

Promotion

ಬೆಂಗಳೂರು,ಫೆಬ್ರವರಿ,6,2021(www.justkannada.in): ಕೇಂದ್ರ ಸರ್ಕಾರದ ಬಜೆಟ್ ಅನ್ನ ಆತ್ಮ ಭರ್ಬರ ಬಜೆಟ್ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.jk

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ಧರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಉಳಿಯಬೇಕಾದರೇ ಹಾಗೆ ಹೇಳಲೇ ಬೇಕು.  ಡಿಕೆ ಶಿವಕುಮಾರ್ –ಸಿದ್ಧರಾಮಯ್ಯ ಸ್ಪರ್ಧೆಯಲ್ಲಿರಬೇಕಾದ್ರೆ ಕೇಂದ್ರ ಬಜೆಟ್ ವಿರೋಧಿಸಲೇಬೇಕು. ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಉಳಿಯಬೇಕು ಎಂದು ಜನರೇ ತೀರ್ಮಾನ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

DK shivakumar- Siddaramaiah- COMPETITION- Union Minister-Prahlad Joshi.
ಕೃಪೆ-internet

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಆರ್ಥಿಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಮನೆ ಮನೆಗೆ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗಿದೆ. ಸ್ವಚ್ಛ ಭಾರತ್-2 ಪ್ರಾರಂಭಿಸುತ್ತೇವೆ. ಯಾವುದೇ ತೆರಿಗೆ ಹೊರೆಯನ್ನ ಜನರ ಮೇಲೆ ಹಾಕುವುದಿಲ್ಲ ಎಂದರು.

Key words: DK shivakumar- Siddaramaiah- COMPETITION- Union Minister-Prahlad Joshi.