ಡಿಕೆಶಿ ಕುಮ್ಮಕ್ಕಿನಿಂದ ಹತ್ಯೆ ಹೇಳಿಕೆ: ಸಚಿವ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಫೆಬ್ರವರಿ,21,2022(www.justkannada.in):  ಡಿ.ಕೆ ಶಿವಕುಮಾರ್ ಪ್ರಚೋದನಾಕಾರಿ ಹೇಳಿಕೆಯ ಕುಮ್ಮಕ್ಕು ಪಡದು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್,  ಈಶ್ವರಪ್ಪರದ್ದು ಹರಕು ಬಾಯಿ ಅಂತಾ ಗೊತ್ತಿದೆ. ಇಂತಹ ಹೇಳಿಕೆ ನೀಡುವ ಈಶ್ವರಪ್ಪ ಮೇಲೆ ಕೇಸ್ ಹಾಕಲಿ.  ದೇಶದ್ರೋಹಿ ಹೇಳಿಕೆ ಕೊಟ್ಟ ಅವನ ಮೇಲೆ ಕ್ರಮ ಆಗಬೇಕು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಹರ್ಷನ ಕೊಲೆ ನಮಗೂ ನೋವಾಗಿದೆ ಇದನ್ನ ನಾನು ನಮ್ಮ ಪಕ್ಷ ಖಂಡಿಸುತ್ತದೆ.   ವೈಯಕ್ತಿಕ ವಿಚಾರಕ್ಕೆ  ಕೊಲೆ ನಡೆದಿರಬಹುದು ಎನ್ನಲಾಗಿದೆ  ದೇಶದ್ರೋಹಿ ಹೇಳಿಕೆ ಕೊಟ್ಟ ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಲಿ ಎಂದು ಆಗ್ರಹಿಸಿದರು.

Key words: DK shivakumar-minister-KS Eshwarappa