ನಾನೇನು ಸನ್ಯಾಸಿಯಲ್ಲ: ಒಕ್ಕಲಿಗರು ನನಗೆ ಬೆಂಬಲವಾಗಿ ನಿಲ್ಲಬೇಕು- ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್.

Promotion

ಮೈಸೂರು,ಜುಲೈ,19,2022(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಮುನ್ನವೇ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ನಡುವೆ ಪರೋಕ್ಷ ಪೈಪೋಟಿ ಎದುರಾಗಿದೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಇದೀಗ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ನಾನೇನು ಸನ್ಯಾಸಿನಾ? ನಾನೂ ಖಾದಿ ಬಟ್ಟೆ ಹಾಕಿದ್ದೇನೆ. ಮೊದಲು ಪಕ್ಷ ಅಧಿಕಾರಕ್ಕೆ ಬರಲಿ. ಆ ಬಳಿಕ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ, ರಾಜ್ಯದ ಇಡೀ ಸಮುದಾಯ ನನ್ನ ಜೊತೆ ನಿಲ್ಲುತ್ತೆ. ಅದರ ಮೇಲೆ ನನಗೆ ಬಹಳ ವಿಶ್ವಾಸ ಇದೆ ಎಂದು ಹೇಳುವ ಮೂಲಕ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಜುಲೈ 17 ರಂದು ನಡೆದಿದ್ದ ಒಕ್ಕಲಿಗ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಒಕ್ಕಲಿಗರು ನನಗೆ ಬೆಂಬಲವಾಗಿ ನಿಲ್ಲಬೇಕು. ನನಗೆ ಎಲ್ಲಾ ಅವಕಾಶಗಳಿವೆ. ಎಸ್ ಎಂ ಕೃಷ್ಣ ಒಕ್ಕಲಿಕ ಸಮುದಾಯದವರು ಕೆಪಿಸಿಸಿ ಅಧ್ಯಕ್ಷರಾಗಿ ನಂತರ ಸಿಎಂ ಆದ್ರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ ನಾನು ಸನ್ಯಾಸಿ ಆಲ್ಲ. ಮುಂದೇನಾಗುತ್ತೆ ನೋಡೋಣಾ.

ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ. ಅಂತಹದೊಂದು ಅವಕಾಶ ಸಿಕ್ಕಿದೆ. ಅವಕಾಶ ಯಾರಿಗೆ ಇದೆ ಅನ್ನೋದನ್ನ ಹೇಳಲ್ಲ ಉಳಿಸಿಕೊಳ್ಳೋದು ಬೆಳೆಸಿಕೊಳ್ಳುವುದು ನಿಮಗೆ ಬಿಟ್ಟಿದ್ದು.  ದೇವರು ವರ , ಶಾಪ ಕೊಡಲ್ಲ, ಅವಕಾಶ ಕೊಡ್ತಾನೆ. ಅವಕಾಶ ಸರಿಯಾಗಿ ಬಳಸಿಕೊಳ್ಳಿ ಎಂದಿದ್ದಾರೆ.

Key words: DK Shivakumar -expressed -desire – become -CM.