ಸಿಬಿಐ ಈಗ ಕಮ್ಯೂನಲ್ ಇನ್ವೆಸ್ಟಿಗೆಷನ್ ಬ್ಯೂರೋ ಆಗಿದೆ- ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಗೆ ಮಾಜಿ ಸಂಸದ ಧೃವನಾರಾಯಣ್ ಕಿಡಿ…

Promotion

ಮೈಸೂರು, ಅಕ್ಟೋಬರ್,5,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದುನ್ನ ಖಂಡಿಸಿರುವ ಮಾಜಿ ಸಂಸದ ಧೃವನಾರಾಯಣ್ ಇದು ರಾಜಕೀಯ ಪ್ರೇರಿತ ದಾಳಿ ಎಂದಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಆರ್ ಧೃವನಾರಾಯಣ್, ಇದೊಂದು ರಾಜಕೀಯ ಪ್ರೇರಿತವಾದ ದಾಳಿ. ಈ ದಾಳಿಯನ್ನು ಪ್ರದೇಶ ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಸಿಬಿಐ ಒಂದು ಪ್ರತಿಷ್ಠಿತ ಸಂಸ್ಥೆಯಾಗಿತ್ತು. ಈಗ ಕಮ್ಯೂನಲ್ ಇನ್ವೆಸ್ಟಿಗೆಷನ್ ಬ್ಯೂರೋ ಆಗಿದೆ. ಇದು ಪೂರ್ವ ನಿಯೋಜಿತ ರಾಜಕೀಯ ದಾಳಿ ಯಾಗಿದ್ಧು,  ವಿರೋಧ ಪಕ್ಷದ ನಾಯಕರನ್ನ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.dk-shivakumar-cbi-attack-former-mp-dhruvanarayan-mysore

ಸಿಬಿಐ ಬಿಜೆಪಿಯ ಏಜೆಂಟ್…

ಹಾಗೆಯೇ ಸಿಬಿಐ ಅನ್ನ ಬಿಜೆಪಿಯ ಏಜೆಂಟ್ ಎಂದ ಧೃವನಾರಾಯಣ್,  ವಿಪಕ್ಷಗಳನ್ನ ಸೆದೆಬಡಿಯುವ ಕೆಲಸ ಆಗುತ್ತಿದೆ. ಡಿಕೆಶಿಯವರು ಕಾಂಗ್ರೆಸ್ ಪಕ್ಷವನ್ನ ಬಲ ಪಡಿಸುತ್ತಿದ್ದರು. ಆದರೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ತಿಳಿದು ದಾಳಿ ನಡೆದಿದೆ. ಇದು ಸೇಡಿನ ರಾಜಕಾರಣದ ದಾಳಿ. ಈ ಸೇಡಿನ ಬೆಂಕಿ ಒಂದು ದಿನ ಬಿಜೆಪಿಯನ್ನೆ ಸುಡಲಿದೆ ಎಂದು ಕಿಡಿಕಾರಿದರು.

 

Key words:  DK Shivakumar- CBI- attack-Former MP -Dhruvanarayan -mysore