ಕ್ಷೇತ್ರದಲ್ಲಿ ಅಕ್ರಮ ಮಾಡುತ್ತಿರುವುದು ಡಿ.ಕೆ ಬ್ರದರ್ಸ್ – ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ….

Promotion

ಬೆಂಗಳೂರು,ಅಕ್ಟೋಬರ್,30,2020(www.justkannada.in):  ಉಪಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಕಾರಣಕ್ಕೆ  ಕ್ಷೇತ್ರದ ವಾತಾವರಣ ಕೆಡಸುತ್ತಿದ್ದಾರೆ. ಕ್ಷೇತ್ರದಲ್ಲಿ ಡಿ.ಕೆ ಬ್ರದರ್ಸ್ ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ನಾಯಕರು ವಾತಾವರಣ ಹಾಳು ಮಾಡುತ್ತಿದ್ದಾರೆ. ತಾವು ಗೆಲ್ಲಬೇಕು ಎಂಬ ಕಾರಣಕ್ಕೆ ವಾತಾವರಣ ಕೆಡಿಸ್ತಿದ್ದಾರೆ.  ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಇದು ಮೊದಲ ಚುನಾವಣೆಯಾಗಿದೆ. ಹೀಗಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಕ್ರಮಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಕ್ರಮ ಮಾಡುತ್ತಿರುವುದು ಡಿ.ಕೆ ಬ್ರದರ್ಸ್, ಮತದಾರರ ವೋಟರ್ ಐಡಿ ಕಾರ್ಡ್ ಸಂಗ್ರಹಿಸಿದ ಆರೋಪ  ನಮ್ಮ ಅಭ್ಯರ್ಥಿಯ ಮೇಲೆ ಹೊರಿಸಿದ್ದಾರೆ ಎಂದು ಹರಿಹಾಯ್ದರು.DK Brothers - illegal –bangalore-MP Shobha Karandlaje

ಇನ್ನು   ಪೊಲೀಸರಿಗೂ ಅವಾಜ್ ಹಾಕಿ ದಬ್ಬಾಳಿಕೆ ಮಾಡ್ತಿದ್ದಾರೆ ಇನ್ನು 3 ದಿನ ಅಕ್ರಮ ನಡೆಸಲು ಸರಿಯಾದ ಸಮಯ. ಹೀಗಾಗಿ ಸಂಸದ ಡಿಕೆ ಸುರೇಶ್ ಕ್ಷೇತ್ರಕ್ಕೆ ಕಾಲಿಡಬಾರದು ಎಂದು  ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

Key words: DK Brothers – illegal –bangalore-MP Shobha Karandlaje