ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಾಟೆ ಕೇಸ್: ಮಾಜಿ ಕಾರ್ಪೋರೇಟರ್ ಬಂಧನ…

Promotion

ಬೆಂಗಳೂರು,ಡಿಸೆಂಬರ್,3,2020(www.justkannada.in):  ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೋರೇಟರ್ ಜಾಕೀರ್ ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.logo-justkannada-mysore

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕಳೆದ ರಾತ್ರಿ ಕಾರ್ಪೊರೇಟರ್  ಜಾಕೀರ್ ರನ್ನ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಬಂಧಿಸಲಾಗಿತ್ತು. ಈಗ ಮಾಜಿ ಕಾರ್ಪೊರೇಟರ್ ಜಾಕೀರ್ ನನ್ನು ಬಂಧಿಸುವ ಮೂಲಕ ಮಹತ್ವದ ಬೆಳವಣಿಗೆಯಾಗಿದೆ. ಸಂಪತ್ ರಾಜ್ ಗಲಭೆ ಪ್ರಕರಣದ ಆರೋಪಿಯಾಗಿದ್ದಾರೆ.DJ halli KG halli- roit-case-ccb-arrest - former corporator.

ಜಾಕೀರ್ ಪುಲಕೇಶಿನಗರ ವಾರ್ಡ್ ನ ಮಾಜಿ ಕಾರ್ಪೊರೇಟರ್. ಈತ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ.

Key words: DJ halli KG halli- roit-case-ccb-arrest – former corporator.