ದೀಪಾವಳಿ ಹಬ್ಬ ಹಿನ್ನೆಲೆ: ಇಂದಿನಿಂದ ತಮಿಳುನಾಡಿಗೆ ವಿಶೇಷ ಬಸ್ ಸಂಚಾರ…

Promotion

ಮೈಸೂರು,ನವೆಂಬರ್,12,2020(www.justkannada.in):   ದೀಪಾವಳಿ ಹಬ್ಬ ಹಿನ್ನೆಲೆ ಮೈಸೂರು ಹಾಗೂ  ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ಬಸ್ ಸಂಚಾರ ಆರಂಭಿಸಲಾಗಿದೆ.diwali-festival-ksrtc-special-bus-service-tamil-nadu

ಇಂದು ಬೆಳಿಗ್ಗೆಯಿಂದಲೇ  ಮೈಸೂರು ಮತ್ತು ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ಬಸ್ ಸಂಚಾರ ಆರಂಭವಾಗಿದೆ. ಮೈಸೂರಿನಿಂದ ಊಟಿ, ಕೊಯಮತ್ತೂರು, ಮಧುರೈ ಸೇರಿದಂತೆ ಮೈಸೂರಿನ ಹಲವು ಭಾಗಗಳಿಗೆ ಬಸ್ ಗಳ ಕಾರ್ಯಾಚರಣೆ ನಡೆಸುತ್ತಿವೆ.

ಕೊರೋನಾ ಕಾರಣದಿಂದಾಗಿ ಹಲವು ತಿಂಗಳುಗಳಿಂದ ತಮಿಳುನಾಡಿಗೆ ರಾಜ್ಯದಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ದೀಪಾವಳಿ ಹಬ್ಬ ಹಿನ್ನೆಲೆ ತಾತ್ಕಾಲಿಕವಾಗಿ ಕೆಎಸ್ಆರ್ಟಿಸಿ ಬಸ್ ಗಳ ವಿಶೇಷ ಕಾರ್ಯಾಚರಣೆ ಆರಂಭವಾಗಿದೆ.diwali-festival-ksrtc-special-bus-service-tamil-nadu

ದೀಪಾವಳಿ ಹಬ್ಬದಲ್ಲಿ ತಮ್ಮೂರಿಗೆ ಪ್ರಯಾಣ ಬೆಳೆಸುವ  ಪ್ರಯಾಣಿಕರ ಅನುಕೂಲಕ್ಕಾಗಿ ದೀಪಾವಳಿ ಹಬ್ಬಕ್ಕೆ ಕೆಎಸ್ಆರ್ಟಿಸಿ 1000 ಹೆಚ್ಚುವರಿ ಬಸ್ ಗಳನ್ನ ಬಿಟ್ಟಿದೆ. ಓಣಂ ಹಬ್ಬದ ಪ್ರಯುಕ್ತವಾಗಿ ಕೇರಳ ರಾಜ್ಯಕ್ಕೆ ಕೆಎಸ್ ಆರ್ ಟಿಸಿ ಇಂದ  ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.

Key words: Diwali festival –KSRTC-Special -bus -service – Tamil Nadu