ದೀಪಾವಳಿ ಸಂಭ್ರಮ: ಕೋವಿಡ್ ನಿಯಮ ಉಲ್ಲಂಘಿಸಿ ಖರೀದಿಯಲ್ಲಿ ಬ್ಯುಸಿಯಾದ ಗ್ರಾಹಕರು….

Promotion

ಬೆಂಗಳೂರು,ನವೆಂಬರ್,15,2020(www.justkannada.in):  ಕೊರೋನಾ ಮಹಾಮಾರಿ ಸಂಕಷ್ಟದ ನಡುವೆ ನಾಡಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹೂ, ಹಣ್ಣು ತರಕಾರಿ ಖರೀದಿಯ ಭರಾಟೆ ಜೋರಾಗಿದೆ.kannada-journalist-media-fourth-estate-under-loss

ಈ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಗ್ರಾಹಕರು ಕೊರೋನಾ ನಿಯಮ ಉಲ್ಲಂಘಿಸಿ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಕೆ.ಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ತರಕಾರಿ ಖರೀದಿಗೆ ಜನರು ಮುಗಿ ಬೀಳುತ್ತಿದ್ದು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮರೆಯುವ ಮೂಲಕ ಕೊರೋನಾ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಹಬ್ಬದ ಖರೀದಿಗಾಗಿ ಜನರು ಕೆ.ಆರ್ ಮಾರುಕಟ್ಟೆಯತ್ತ ಧಾವಿಸುತ್ತಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ. ಜತೆಗೆ ದೈಹಿಕ ಅಂತರ ಮರೆತು ಮಾಸ್ಕ್ ಧರಿಸದೇ ಗ್ರಾಹಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದು ಪೊಲೀಸರು ಮತ್ತು ಮಾರ್ಷಲ್ ಗಳು ಜನರನ್ನ ಚದುರಿಸುತ್ತಿದ್ದಾರೆ.diwali-celebration-bangalore-market-customers-busy-buying-violation-covid-rule

ಇನ್ನು ಧಾರವಾಡದಲ್ಲೂ ಸಹ ಗ್ರಾಹಕರು ದೀಪಾವಳಿ ಹಬ್ಬದ ಖರೀದಿ ಭರಾಟೆಯಲ್ಲಿ  ಕೊರೋನಾ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಧಾರವಾಡದ ಹೂವಿನ ಮಾರುಕಟ್ಟೆಯಲ್ಲಿ ಜನರು ಮಾಸ್ಕ್ ಧರಿಸದೇ ದೈಹಿಕ ಅಂತರ ಮರೆತು ಖರೀದಿಯಲ್ಲಿ ನಿರತರಾಗಿದ್ದಾರೆ.

Key words: Diwali celebration-bangalore-market-Customers –busy- buying -violation – Covid rule.