ಏರ್ ಇಂಡಿಯಾ ಖಾಸಗೀಕರಣ: ಆರು ತಿಂಗಳೊಳಗೆ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಏರ್ ಇಂಡಿಯಾ ಸಿಬ್ಬಂದಿಗಳಿಗೆ ಸೂಚನೆ

 

ನವ ದೆಹಲಿ, ಅಕ್ಟೋಬರ್ ೧, ೨೦೨೧ (www.justkannada.in): ರಾಷ್ಟ್ರೀಯ ಪ್ರಯಾಣಿಕ ವಾಯುಯಾನ ಸಂಸ್ಥೆ ಏರ್ ಇಂಡಿಯಾದ ಖಾಸಗೀಕರಣ ಅಥವಾ ಆಸ್ತಿಗಳ ನಗದೀಕರಣದಿಂದಾಗಿ ಇನ್ನು ಆರು ತಿಂಗಳೊಳಗಾಗಿ ಎಲ್ಲಾ ಸಿಬ್ಬಂದಿಗಳಿಗೂ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಏರ್ ಇಂಡಿಯಾಗೆ ಸೂಚಿಸಿದೆ.

ಈ ಪ್ರಕಾರವಾಗಿ, ಏರ್ ಇಂಡಿಯಾ ಒದಗಿಸಿರುವ ವಿವಿಧ ನಿವಾಸಗಳಲ್ಲಿ ವಾಸಿಸುತ್ತಿರುವ ಉದ್ಯೋಗಿಗಳು ತಮ್ಮ ವಾಸ ಸ್ಥಳವನ್ನು ಖಾಲಿ ಮಾಡಬೇಕು ಅಥವಾ ಕಠಿಣ ಶಿಕ್ಷೆ ಅಥವಾ ಬೃಹತ್ ದಂಡದೊಂದಿಗೆ ಶಿಸ್ತುಕ್ರಮವನ್ನು ಎದುರಿಸಬೇಕಾಗುತ್ತದೆ.

ಏರ್ ಇಂಡಿಯಾದ ಸಿಬ್ಬಂದಿಗಳಿಗೆ ಇದೊಂದು ಆಘಾತವಾಗಿದೆ, ಅದರಲ್ಲಿಯೂ ವಿಶೇಷವಾಗಿ ದೆಹಲಿ ಅಥವಾ ಮುಂಬೈನAತಹ ಅತೀ ಹೆಚ್ಚು ಬಾಡಿಗೆ ಇರುವಂತಹ ಮಹಾನಗರಗಳಲ್ಲಿ ವಾಸಿಸುತ್ತಿರುವ ಏರ್ ಇಂಡಿಯಾದ ಸಿಬ್ಬಂದಿಗಳಿಗೆ ಇದು ದೊಡ್ಡ ಆಘಾತವೇ ಆಗಿದೆ.
ಪ್ರಸ್ತುತ ಏರ್ ಇಂಡಿಯಾ ದೆಹಲಿ ಹಾಗೂ ಮುಂಬೈ ಎರಡೂ ನಗರಗಳಲ್ಲಿ ತನ್ನ ಕಾಲೋನಿಗಳನ್ನು ಹೊಂದಿದೆ. ಈ ಕಾಲೋನಿಗಳಲ್ಲಿರುವ ಫ್ಲಾಟ್‌ಗಳನ್ನು ಸಂಸ್ಥೆಯ ಉದ್ಯೋಗಿಗಳಿಗೆ ರಿಯಾಯಿತಿ ದರಗಳಲ್ಲಿ ವಾಸಕ್ಕೆ ಒದಗಿಸಲಾಗಿತ್ತು. ಭಾರತ ಸರ್ಕಾರ ಏರ್ ಇಂಡಿಯಾದ ಖಾಸಗೀಕರಣಕ್ಕೆ ಯೋಜಿಸಿದ್ದು, ಈ ಪ್ರಕ್ರಿಯೆ ವೇಗಗೊಂಡಿದ್ದು, ಅಂತಿಮ ಹಂತವನ್ನು ತಲುಪಿದೆ.

ಏರ್ ಇಂಡಿಯಾ ಸಿಎಂಡಿ ಅವರು ನಾಗರಿಕ ವಾಯು ಯಾನ ಸಚಿವರಿಗೆ ಸೆಪ್ಟೆಂಬರ್ ೨೯ರಂದು ಬರೆದಿರುವಂತಹ ಪತ್ರವೊಂದರಲ್ಲಿ: “ಏರ್ ಇಂಡಿಯಾದ ಉದ್ಯೋಗಿಗಳು ತಮ್ಮ ನಿವಾಸಗಳಲ್ಲಿ ಖಾಸಗೀಕರಣವಾದ ನಂತರ ಆರು ತಿಂಗಳವರೆಗೂ ಅಥವಾ ಸಂಬAಧಪಟ್ಟ ಕಟ್ಟಡದ ನಗದೀಕರಣವಾಗುವವರೆಗೂ, ಯಾವುದು ಮುಂಚೆ ಜರುಗುತ್ತದೋ ಅಲ್ಲಿಯವರೆಗೂ ವಾಸವನ್ನು ಮುಂದುವರೆಸಬಹುದು,” ತಿಳಿಸಿದ್ದಾರೆ.
ಈ ನಿರ್ಧಾರವನ್ನು ಎಐಎಸ್‌ಎಎಂ (Air India Specific Alternative Mechanism) ಆಗಸ್ಟ್ ೯, ೨೦೨೧ರಂದು ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.

India-England-Between-Airlines-now-Beginning 

ಇದರ ಜೊತೆಗೆ, ಪತ್ರದಲ್ಲಿ, “ಸೆಪ್ಟೆಂಬರ್ ೩೦, ೨೦೨೧ರಂದು ನಿವೃತ್ತಿಯಾಗುತ್ತಿರುವ ಉದ್ಯೋಗಿಗಳು ಗರಿಷ್ಠ ನಾಲ್ಕು ತಿಂಗಳವರೆಗೂ ಅಥವಾ ಖಾಸಗೀಕರಣ ಅಥವಾ ಆಸ್ತಿಯ ನಗದೀಕರಣವಾದ ನಂತರದಲ್ಲಿ ಆರು ತಿಂಗಳವರೆಗೂ ವಾಸ ಮುಂದುವರೆಸಬಹುದು. ಅದಾದ ನಂತರ ಯಾವುದೇ ಕಾರಣಕ್ಕೂ ವಾಸವನ್ನು ಮುಂದುವರೆಸುವ ಅವಕಾಶ ನೀಡಲಾಗುವುದಿಲ್ಲ. ಪ್ರಸ್ತುತ ಏರ್ ಇಂಡಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ, ಏರ್ ಇಂಡಿಯಾದ ಕಾಲೋನಿಗಳಲ್ಲಿ ವಾಸಿಸುತ್ತಿರುವಂತಹ ಉದ್ಯೋಗಿಗಳು ಖಾಸಗೀಕರಣವಾದ ಆರು ತಿಂಗಳವರೆಗೂ ಅಥವಾ ಆಸ್ತಿ ನಗದೀಕರಣವಾದ ನಂತರದಲ್ಲಿ ಆರು ತಿಂಗಳವರೆಗೂ ತಮಗೆ ಹಂಚಿಕೆ ಮಾಡಲಾಗಿರುವ ನಿವಾಸದಲ್ಲಿ ವಾಸವನ್ನು ಮುಂದುವರೆಸಬಹುದು,” ಎಂದು ತಿಳಿಸಲಾಗಿದೆ.

“ಈ ಹೊಸ ನಿಯಮಗಳಡಿ ಏರ್ ಇಂಡಿಯಾ ವತಿಯಿಂದ ಸಿಬ್ಬಂದಿಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯಗೊಳಿಸಿಲಾಗಿಲ್ಲ. ಹಾಗಾಗಿ, ದೆಹಲಿ ಹಾಗೂ ಮುಂಬೈನAತಹ ಮಹಾನಗರಗಳಲ್ಲಿ ವಾಸಿಸುತ್ತಿರುವಂತಹ ಏರ್ ಇಂಡಿಯಾದ ಅನೇಕ ಉದ್ಯೋಗಿಗಳಿಗೆ ತಾವು ಸದ್ಯದಲ್ಲಿಯೇ ವಸತಿರಹಿತರಾಗುವ ಭಯ ಮೂಡಿದೆ, ಅದರಲ್ಲೂ ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಭಯ ಇನ್ನೂ ಜಾರಿಯಲ್ಲಿರುವ ಈ ಸಮಯದಲ್ಲಿ,” ಎನ್ನುತ್ತಾರೆ ಹಿರಿಯ ಸಿಬ್ಬಂದಿಯೊಬ್ಬರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : Divestment Bound: Air India staff asked to vacate accommodations in 6 months