ಮೈಸೂರಿನಲ್ಲಿ ಪತ್ರಕರ್ತರಿಗೆ ಫುಡ್ ಕಿಟ್ ವಿತರಣೆ.

Promotion

ಮೈಸೂರು,ಜೂನ್,15,2021(www.justkannada.in):  ಕೋವಿಡ್ ಸಂದರ್ಭದಲ್ಲಿ ತೊಂದರೆಗೆ ಒಳಗಾಗಿರುವ ಮಾಧ್ಯಮದವರಿಗೆ ನೆರವಾಗುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಕೊಡ ಮಾಡಿರುವ ದಿನಸಿ ಪದಾರ್ಥಗಳನ್ನು ಒಳಗೊಂಡ ಫುಡ್ ಕಿಟ್ ಅನ್ನು ಸಂಘದ ಸದಸ್ಯರಿಗೆ ವಿತರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.jk

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಫುಡ್ ಕಿಟ್ ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್, ಕೊರೊನಾ ಎರಡನೇ ಅಲೆಯ ದುಷ್ಪರಿಣಾಮ ಮಾಧ್ಯಮದವರ ಮೇಲೂ ಬೀರಿದ ಸಂದರ್ಭ ಹಲವಾರು ಸಹೃದಯರು ಮುಂದೆ ಬಂದು ಪತ್ರಕರ್ತರಿಗೆ ಆರೋಗ್ಯ ಪರಿಕರಗಳನ್ನು ನೀಡಿದ್ದಾರೆ ಎಂದರು.

ಮಾಧ್ಯಮ ಗೆಳೆಯರು ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದ ವೇಳೆಯೂ ಜೀವದ ಹಂಗು ತೊರೆದು   ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಪತ್ರಕರ್ತರು ಎಚ್ಚರಿಕೆಯಿಂದ ಇರುವ ಮೂಲಕ ಈ ಸಂಕಷ್ಟದಿಂದ ಹೊರಬರಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರೇ ಮುಂದೆ ಬಂದು ದಿನಸಿ ಪದಾರ್ಥಗಳ ಕಿಟ್ ಕೊಡ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರಿಗೆ ನೆರವಾಗುವ ಭರವಸೆಯನ್ನು ಅವರು ನೀಡಿದ್ದಾರೆ. ಕಷ್ಟಕಾಲದಲ್ಲಿ ನೆರವಾದ ಎಲ್ಲರಿಗೂ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ  ಎಂ.ಎಸ್. ಬಸವಣ್ಣ, ಖಜಾಂಚಿ ನಾಗೇಶ್ ಪಾಣತ್ತಲೆ, ನಗರ ಕಾರ್ಯದರ್ಶಿ ಪಿ ರಂಗಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಚಮ್ಮ ಮಲ್ಲಿಗೆ, ಬೀರೆಶ್, ಸುರೇಶ್ ಹಾಜರಿದ್ದರು.

Key words: Distribution -Food Kit – Journalists -Mysore.