ಅತೃಪ್ತ ಶಾಸಕರ ಅನರ್ಹತೆಯಿಂದ ಅತ್ಯಂತ ಹೆಚ್ಚು ಲಾಭ ಬಿಜೆಪಿಗೆ- ಹೇಗೆ ಲಾಭವಾಗುತ್ತೆ ಎಂಬುದನ್ನ ವಿವರಿಸಿದ ದಿನೇಶ್ ಅಮೀನ್ ಮಟ್ಟು…

Promotion

ಬೆಂಗಳೂರು,ಜು,17,2019(www.justkannada.in) ಅತೃಪ್ತ ಶಾಸಕರು ಅನರ್ಹತೆಗೊಂಡರೇ ಬಿಜೆಪಿಗೆ  ಅತ್ಯಂತ ಹೆಚ್ಚು ಲಾಭವಾಗಲಿದೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ದಿನೇಶ್ ಅಮಿನ್ ಮಟ್ಟು ಸಿಎಂ ಮಾಧ್ಯಮ ಸಲಹೆಗಾರರಾಗಿದ್ದರು. ಅತೃಪ್ತ ಶಾಸಕರ ಅನರ್ಹತೆಯಿಂದ  ಬಿಜೆಪಿಗೆ ಹೇಹೆ ಹೆಚ್ಚು ಲಾಭವಾಗುತ್ತದೆ ಎಂಬುದನ್ನ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ.

ಅತೃಪ್ತ ಶಾಸಕರ ಅನರ್ಹತೆಯಿಂದ

  1. ಸದನದ ಬಲ 209ಕ್ಕೆ ಕುಸಿದು ಬಿಜೆಪಿಗೆ ಸುಲಭದಲ್ಲಿ ಬಹುಮತ ಸಿಗಲಿದೆ.
  2. ಅತೃಪ್ತ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕಷ್ಟ ಇರುವುದಿಲ್ಲ.
  3. ಗೆದ್ದರೆ ಸಚಿವರಾಗಿ ಮಾಡಬೇಕೆಂಬ ಒತ್ತಡದ ಸಂಕಷ್ಟವೂ ಇಲ್ಲ‌.

ಇದರಿಂದ

  1. ಕೈಕೊಟ್ಟ ಶಾಸಕರಿಗೆ ಶಿಕ್ಷೆಯಾಯಿತೆಂಬ ಸಮಾಧಾನ ಕಾಂಗ್ರೆಸ್ ಪಕ್ಷಕ್ಕೆ.
  2. ವಿಶ್ವಾಸ ದ್ರೋಹ ಮಾಡಿದವರಿಗೆ ಶಿಕ್ಷೆಯಾಯಿತೆಂಬ ಸಮಾಧಾನ ಮತದಾರರಿಗೆ .

ಈ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆಗಾಗಿ ಬಹಿರಂಗವಾಗಿಯೋ, ರಹಸ್ಯವಾಗಿಯೋ ಬಿಜೆಪಿ ನಾಯಕರು ಸಹಕರಿಸಬೇಕು. ಇಂತಹ ಪ್ರಯತ್ನವನ್ನು ಬಿಜೆಪಿ ಮಾಡಿದರೆ ಈ ಒಂದು ಕಾರಣಕ್ಕಾಗಿ ಆ ಪಕ್ಷವನ್ನು ನಾನು ಅಭಿನಂದಿಸುತ್ತೇನೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

Key words: Dissatisfied MLA-disqualification- Profit –BJP-Dinesh Amin Madhu